ಮಹಾರಾಷ್ಟ್ರ: ಅಜಿತ್‌ ಪವಾರ್‌ಗೆ 36 ಶಾಸಕರ ಬೆಂಬಲವಿಲ್ಲ- ಎನ್‌ಸಿಪಿ

ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಕೆಲವು ನಾಯಕರೊಂದಿಗೆ ಸೇರಿಕೊಂಡಿರುವ ಅಜಿತ್ ಪವಾರ್ ಅವರಿಗೆ 36 ಶಾಸಕರ ಬೆಂಬಲವಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಹೇಳಿದೆ.
ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್
ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಕೆಲವು ನಾಯಕರೊಂದಿಗೆ ಸೇರಿಕೊಂಡಿರುವ ಅಜಿತ್ ಪವಾರ್ ಅವರಿಗೆ 36 ಶಾಸಕರ ಬೆಂಬಲವಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಹೇಳಿದೆ.

ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಅವರು, ಎಲ್ಲಾ 53 ಶಾಸಕರನ್ನು ಸಂಪರ್ಕಿಸುತ್ತಿದ್ದು, ಇಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದ್ದು,  ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗೆ ಅನ್ವಯವಾಗದಿರಲು ಅಜಿತ್ ಪವಾರ್‌ಗೆ ಕನಿಷ್ಠ 36 ಶಾಸಕರ ಬೆಂಬಲದ ಅಗತ್ಯವಿದೆ.ಅಜಿತ್ ಪವಾರ್ ಅವರಿಗೆ 36 ಶಾಸಕರ ಬೆಂಬಲವಿಲ್ಲ ಎಂದು ಕ್ರಾಸ್ಟೊ ಹೇಳಿದ್ದಾರೆ.

ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಭಾನುವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರೆ, ಎನ್‌ಸಿಪಿಯ ಇತರ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಜಿತ್ ಪವಾರ್ ಅವರು 40 ಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಮತ್ತು ಅವರ ಪಕ್ಷದ ಒಂಬತ್ತು ಎಂಎಲ್‌ಸಿಗಳಲ್ಲಿ ಆರಕ್ಕೂ ಹೆಚ್ಚು ಬೆಂಬಲವನ್ನು ಹೊಂದಿದ್ದಾರೆ ಎಂದು ಅವರು ರಾಜಭವನಕ್ಕೆ ಸಲ್ಲಿಸಿರುವ ಪಟ್ಟಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com