ಫ್ರಾನ್ಸ್ ಗಲಭೆ ನಿಯಂತ್ರಣಕ್ಕೆ ಯೋಗಿಯನ್ನು ಕಳಿಸಿಕೊಡಿ; ಜರ್ಮನಿ ವೈದ್ಯರ ಮನವಿ: ಉತ್ತರ ಪ್ರದೇಶ ಸಿಎಂಒ ಪ್ರತಿಕ್ರಿಯೆ ಇದು...

ಫ್ರಾನ್ಸ್ ನ ಗಲಭೆಯನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕಳಿಸಿಕೊಡಿ ಎಂದು ಜರ್ಮನಿಯ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. 
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ನವದೆಹಲಿ: ಕಾನೂನು ಉಲ್ಲಂಘಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಯುವಕನೋರ್ವ ಅಧಿಕಾರಿಗಳ ಗುಂಡೇಟಿಗೆ ಬಲಿಯಾದ ಘಟನೆ ನಂತರ ಹೊತ್ತಿ ಉರಿಯುತ್ತಿರುವ ಫ್ರಾನ್ಸ್ ನ ಗಲಭೆಯನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕಳಿಸಿಕೊಡಿ ಎಂದು ಜರ್ಮನಿಯ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. 

ಪ್ರೊ.ಎನ್ ಜಾನ್ ಕ್ಯಾಮ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಸಿಎಂಒ,  ಈ ಸಲಹೆ ಯೋಗಿ ಆದಿತ್ಯನಾಥ್ ಮಾದರಿಗೆ ಜಗತ್ತಿನಾದ್ಯಂತ ಲಭಿಸಿರುವ ಜನಪ್ರಿಯತೆ ಎಂದು ಬಣ್ಣಿಸಿದೆ.

ಜರ್ಮನಿಯ ಹೃದ್ರೋಗ ತಜ್ಞ ಎಂದು ಹೇಳಿಕೊಂಡಿರುವ ಪ್ರೊ. ಎನ್ ಜಾನ್ ಕ್ಯಾಮ್,  ಫ್ರಾನ್ಸ್ ನಲ್ಲಿರುವ ಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಭಾರತ ಯೋಗಿ ಆದಿತ್ಯನಾಥ್ ಅವರನ್ನು ಕಳಿಸಬೇಕು, ಅವರು 24 ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಾರೆ ಎಂದು ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿ ಹೇಳಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಸಿಎಂಒ,  ಉಗ್ರವಾದವು ಗಲಭೆಗಳಿಗೆ ಉತ್ತೇಜನ ನೀಡಿದಾಗ, ಅವ್ಯವಸ್ಥೆ ಆವರಿಸಿದಾಗ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಸಮಸ್ಯೆ ಜಗತ್ತಿನ ಯಾವುದೇ ಭಾಗದಲ್ಲಿ ಉಂಟಾದಾಗ, ಜಗತ್ತು ಸಾಂತ್ವನಕ್ಕೆ ಹಾಗೂ ಮಹಾರಾಜ್ ಜಿ (ಆದಿತ್ಯನಾಥ್) ಸ್ಥಾಪಿಸಿದ ಯೋಗಿ ಮಾದರಿಯ ಕಾನೂನು ಸುವ್ಯವಸ್ಥೆಯನ್ನು ಬಯಸುತ್ತದೆ ಎಂದು ಹೇಳಿದೆ. 

ಬಿಜೆಪಿ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆದಿತ್ಯನಾಥ್ ಅವರು ರಾಜ್ಯದಲ್ಲಿ ಮಾಫಿಯಾ ಮತ್ತು ಕ್ರಿಮಿನಲ್‌ಗಳನ್ನು ಮೌನವಾಗಿಸುವುದರಲ್ಲಿ ಸಮರ್ಥರಾಗಿದ್ದಾರೆ. ''ಆದಿತ್ಯನಾಥ್ ಅವರ ವಿಶೇಷತೆಯೆಂದರೆ ಅವರು ಅಪರಾಧಿಗಳೊಂದಿಗೆ ಕಠಿಣವಾಗಿ ವ್ಯವಹರಿಸುತ್ತಾರೆ... ಅವರ ಮನೆಗಳನ್ನು ಧ್ವಂಸಗೊಳಿಸಲು ಅವರು ಬುಲ್ಡೋಜರ್‌ಗಳನ್ನು ಬಳಸುತ್ತಾರೆ,'' ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com