ಚುನಾವಣೆ ಎದುರಿಸಲಿರುವ ರಾಜಸ್ಥಾನದಲ್ಲಿ 5,600 ಕೋಟಿ ರೂ. ಹೆದ್ದಾರಿ ಯೋಜನೆಗೆ ಗಡ್ಕರಿ ಶಂಕುಸ್ಥಾಪನೆ

ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಪ್ರತಾಪಗಢದಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು...
ಕೇಂದ್ರ ಸಚಿವ ನಿತಿನ್ ಗಡ್ಕರಿ.
ಕೇಂದ್ರ ಸಚಿವ ನಿತಿನ್ ಗಡ್ಕರಿ.

ಪ್ರತಾಪಗಢ: ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಪ್ರತಾಪಗಢದಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳಾರ ಶಂಕುಸ್ಥಾಪನೆ ಮಾಡಿದರು.

3,775 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು 1,850 ಕೋಟಿ ರೂ. ಮೌಲ್ಯದ ಏಳು ಸಣ್ಣ ಯೋಜನೆಗಳನ್ನು ಇದು ಒಳಗೊಂಡಿದೆ.

ನಾಲ್ಕು ಪ್ರಮುಖ ಯೋಜನೆಗಳಲ್ಲಿ ಕಿಶನ್‌ಗಢ್ ಮತ್ತು ಗುಲಾಬ್‌ಪುರ, ಗುಲಾಬ್‌ಪುರ ಮತ್ತು ಚಿತ್ತೋರ್‌ಗಢ್ ನಡುವೆ ಎನ್‌ಎಚ್ 48 ಅನ್ನು ಆರು ಪಥದ ಹೆದ್ದಾರಿಯಾಗಿ ನಿರ್ಮಾಣ ಸಹ ಸೇರಿದೆ.

ಪ್ರತ್ಯೇಕವಾಗಿ, ಕೇಂದ್ರ ರಸ್ತೆ ನಿಧಿಯಡಿ 2,250 ಕೋಟಿ ವೆಚ್ಚದಲ್ಲಿ 74 ಯೋಜನೆಗಳಿಗೆ ಅನುಮೋದನೆ ನೀಡುವುದಾಗಿ ಕೇಂದ್ರ ಸಚಿವರು ಘೋಷಿಸಿದ್ದಾರೆ. ಅಲ್ಲದೆ ಈ ಯೋಜನೆಗಳ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com