ಸಹಾಯಕ ಪ್ರಾಧ್ಯಾಪಕರಿಗೆ ಪಿಎಚ್‌ಡಿ ಕಡ್ಡಾಯವಲ್ಲ; NET, SET, SLET ಪ್ರಮುಖ ಮಾನದಂಡ

ಸಹಾಯಕ ಪ್ರಾಧ್ಯಾಪಕರಾಗಲು ಇನ್ನುಮುಂದೆ ಪಿಎಚ್‌ಡಿ ಕಡ್ಡಾಯವಲ್ಲ. ಐಚ್ಛಿಕವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಬುಧವಾರ ಪ್ರಕಟಿಸಿದೆ.
ಯುಜಿಸಿ (ಸಂಗ್ರಹ ಚಿತ್ರ)
ಯುಜಿಸಿ (ಸಂಗ್ರಹ ಚಿತ್ರ)

ನವದೆಹಲಿ: ಸಹಾಯಕ ಪ್ರಾಧ್ಯಾಪಕರಾಗಲು ಇನ್ನುಮುಂದೆ ಪಿಎಚ್‌ಡಿ ಕಡ್ಡಾಯವಲ್ಲ. ಐಚ್ಛಿಕವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಬುಧವಾರ ಪ್ರಕಟಿಸಿದೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET), ರಾಜ್ಯ ಅರ್ಹತಾ ಪರೀಕ್ಷೆ(SET) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ(SLET) ಪ್ರಮುಖ ಮಾನದಂಡವಾಗಿದೆ ಎಂದು ಯುಜಿಸಿ ತಿಳಿಸಿದೆ.

ಜುಲೈ 1, 2023 ರಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ. ಅದು ಐಚ್ಛಿಕವಾಗಿರುತ್ತದೆ ಎಂದು ಯುಜಿಸಿ ಅಧ್ಯಕ್ಷ ಪ್ರೊ ಎಂ ಜಗದೇಶ್ ಕುಮಾರ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

"ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ NET/SET/SLET ಕನಿಷ್ಠ ಮಾನದಂಡವಾಗಿದೆ" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com