ತಡ ರಾತ್ರಿ ಫಡ್ನವೀಸ್-ಶಿಂಧೆ ಸಭೆ; ಡಿಸಿಎಂ ಅಜಿತ್ ಪವಾರ್ ಗೈರು!

ಎನ್ ಸಿಪಿಯಲ್ಲಿನ ಬಿರುಕು ಮುಂದುವರೆದಿರುವ ನಡುವೆ ಜು.06 ರಂದು ತಡರಾತ್ರಿ ಮಹಾರಾಷ್ಟ್ರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ- ದೇವೇಂದ್ರ ಫಡ್ನವಿಸ್
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ- ದೇವೇಂದ್ರ ಫಡ್ನವಿಸ್

ಮುಂಬೈ: ಎನ್ ಸಿಪಿಯಲ್ಲಿನ ಬಿರುಕು ಮುಂದುವರೆದಿರುವ ನಡುವೆ ಜು.06 ರಂದು ತಡರಾತ್ರಿ ಮಹಾರಾಷ್ಟ್ರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಸಿಎಂ ಏಕನಾಥ್ ಶಿಂಧೆ- ಡಿಸಿಎಂ ದೇವೇಂದ್ರ ಫಡ್ನವಿಸ್ ಸಿಎಂ ಗೃಹ ಕಚೇರಿಯಲ್ಲಿ ತಡರಾತ್ರಿ ಸಭೆ ನಡೆಸಿದ್ದಾರೆ.
  
ಈ ಬೆಳವಣಿಗೆಗೂ ಮುನ್ನ, ಎನ್ ಸಿಪಿ ನಾಯಕ ಅಜಿತ್ ಪವಾರ್ ಶಿಂಧೆ-ಫಡ್ನವಿಸ್ ಸರ್ಕಾರವನ್ನು ಸೇರಿರುವುದರ ಬಗ್ಗೆ ಶಿವಸೇನೆ ಶಾಸಕರಲ್ಲಿ ಅಸಮಾಧಾನವಿದೆ ಎಂಬ ಮಾಧ್ಯಮಗಳ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಶಿಂಧೆ, ಈ ಸರ್ಕಾರ ಮತ್ತಷ್ಟು ಸದೃಢಗೊಂಡಿದೆ. ತಾವು ಸಿಎಂ ಹುದ್ದೆಯಿಂದ ನಿರ್ಗಮಿಸುವುದು ಹಾಗೂ ಶಿವಸೇನೆ ಶಾಸಕರಲ್ಲಿ ಅಸಮಾಧಾನ ಮೂಡಿರುವ ಬಗ್ಗೆ ಪ್ರಕಟವಾಗಿರುವ ವರದಿಗಳನ್ನು ವದಂತಿಗಳೆಂದು ಹೇಳಿದ್ದರು. 

ತಾವು ಸಿಎಂ ಆಗಬೇಕೆಂಬ ಅಜಿತ್ ಪವಾರ್ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಜಿತ್ ಪವಾರ್ ಅವರ ಈ ಹೇಳಿಕೆಯಿಂದಾಗಿ ಶಿವಸೇನೆಯ ಶಾಸಕರಲ್ಲಿ ಆತಂಕ ಮೂಡಿದೆ. ಈ ನಡುವೆ ಶಿಂಧೆ ಬಣದ ಸಚಿವರಾಗಿರುವ ಉದಯ್ ಸಮಂತ್, ಶಿಂಧೆ ಅವರ ರಾಜೀನಾಮೆ ವದಂತಿ ಸುಳ್ಳು ಎಂದು ಹೇಳಿದ್ದಾರೆ.

ಎನ್ ಸಿಪಿ ಬಿರುಕಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏಕನಾಥ್ ಶಿಂಧೆ, ಪಕ್ಷದಲ್ಲಿ ನಡೆದಿರುವ ಎಲ್ಲದರ ಬಗ್ಗೆಯೂ ಎನ್ ಸಿಪಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com