ಹಿಮಾಚಲ ಪ್ರದೇಶ: 6 ಮಂದಿ ನಿಧನ, ಶ್ರೀಖಂಡ್ ಮಹದೇವ ಯಾತ್ರೆ ಸ್ಥಗಿತ

ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಟ್ರೆಕ್ ವೇಳೆ 6 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಶ್ರೀಖಂಡ್ ಮಹದೇವ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಶ್ರೀಖಂಡ್ ಮಹದೇವ ಯಾತ್ರೆ
ಶ್ರೀಖಂಡ್ ಮಹದೇವ ಯಾತ್ರೆ

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಟ್ರೆಕ್ ವೇಳೆ 6 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಶ್ರೀಖಂಡ್ ಮಹದೇವ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ರಾಜ್ಯದಲ್ಲಿ ತೀವ್ರವಾಗಿ ಮಳೆ ಸುರಿದ ನಡುವೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಕುಲ್ಲು ಜಿಲ್ಲಾಡಳಿತ ಯಾತ್ರೆಯನ್ನು ಜುಲೈ 11 ವರೆಗೆ ಮುಂದೂಡಿತ್ತು.

ಮಧ್ಯಪ್ರದೇಶದ ಅಮರ್ ಮೊಯೆದ ಶ್ರೀಖಂಡ್ ಮಹದೇವ್ ಗೆ ಟ್ರೆಕಿಂಗ್ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಜುಲೈ 7 ರಂದು ಮೃತಪಟ್ಟಿದ್ದರು, ಯಾತ್ರಾರ್ಥಿಗಳು ಜೂನ್‌ನಲ್ಲಿ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಯಾತ್ರಾರ್ಥಿಗಳ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳ ಪ್ರಕಾರ, ಹೆಚ್ಚಿನ ಎತ್ತರ ಪ್ರದೇಶವಾಗಿರುವುದರಿಂದ ಟ್ರೆಕಿಂಗ್ ಹೋಗುವವರಿಗೆ ಆಮ್ಲಜನಕದ ಸಮಸ್ಯೆ ಎದುರಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com