ಗಗನಕ್ಕೇರಿದ ಬೆಲೆ: ಜನರನ್ನು ನಿಯಂತ್ರಿಸಲು ಬೌನ್ಸರ್ ನೇಮಕ ಮಾಡಿಕೊಂಡ ಟೊಮೊಟೋ ವ್ಯಾಪಾರಿ!

ವಾರಣಾಸಿಯ ಲಂಕಾ ಪ್ರದೇಶದಲ್ಲಿ ಟೊಮೆಟೋ ಕೊಳ್ಳಲು ಬರುವ ಗ್ರಾಹಕರಿಂದ ವಾಗ್ವಾದ ಮತ್ತು ಮಾತಿನ ಚಕಮಕಿಗಳನ್ನು ತಪ್ಪಿಸಲು ತರಕಾರಿ ವ್ಯಾಪಾರಿಯೋರ್ವ ಬೌನ್ಸರ್‌ ಗಳನ್ನು ನೇಮಿಸಿಕೊಂಡ ಘಟನೆ ನಡೆದಿದೆ.
ಬೌನ್ಸರ್ ನೇಮಿಸಿಕೊಂಡ ಟೊಮೋಟೋ ವ್ಯಾಪಾರಿ
ಬೌನ್ಸರ್ ನೇಮಿಸಿಕೊಂಡ ಟೊಮೋಟೋ ವ್ಯಾಪಾರಿ

ವಾರಣಾಸಿ: ದೇಶದಲ್ಲಿ ಇದೀಗ ಟೊಮೆಟೊ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬಹುತೇಕ ಕಡೆ ಟೊಮೆಟೊ ಬೆಲೆ 200 ರೂಪಾಯಿ ಗಡಿ ದಾಡಿದೆ. ಟೊಮೆಟೊಗೆ ಚಿನ್ನದ ಬೆಲೆಯಾಗಿರುವ ಕಾರಣ ಇದೀಗ ಮಾರಾಟಕ್ಕಿಂತ ಅದನ್ನು ಕಾಯುವುದೇ ಅತೀ ದೊಡ್ಡ ತಲೆನೋವಾಗಿದೆ.

ವಾರಣಾಸಿಯ ಲಂಕಾ ಪ್ರದೇಶದಲ್ಲಿ ಟೊಮೆಟೋ ಕೊಳ್ಳಲು ಬರುವ ಗ್ರಾಹಕರಿಂದ ವಾಗ್ವಾದ ಮತ್ತು ಮಾತಿನ ಚಕಮಕಿಗಳನ್ನು ತಪ್ಪಿಸಲು ತರಕಾರಿ ವ್ಯಾಪಾರಿಯೋರ್ವ ಬೌನ್ಸರ್‌ ಗಳನ್ನು ನೇಮಿಸಿಕೊಂಡ ಘಟನೆ ನಡೆದಿದೆ. ಈಗಾಗಲೇ ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಆದ್ದರಿಂದ ಇಬ್ಬರನ್ನು ಜನರನ್ನು ನಿಯಂತ್ರಿಸಲೆಂದೇ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ನಾನು ಜನರಲ್ಲಿ ಟೊಮೆಟೊ ದರದ ಬಗ್ಗೆ ವಾದಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಅಂಗಡಿಯ ಜನರು ಕೂಡ ಚೌಕಾಸಿ ಮಾಡಲು ಪ್ರಯತ್ನಿಸಿದರು. ಆದ್ದರಿಂದ ನಿರಂತರ ವಾದಗಳನ್ನು ಕೊನೆಗೊಳಿಸಲು, ನಾನು ಬೌನ್ಸರ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ" ಎಂದು ಫೌಜಿ ಪಿಟಿಐಗೆ ತಿಳಿಸಿದರು.

ಟೊಮೇಟೊವನ್ನು ಕೆಜಿಗೆ 140-160 ರೂ.ಗೆ ಮಾರಾಟ ಮಾಡುತ್ತಿರುವ ಫೌಜಿ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಗಾಡಿಯಲ್ಲಿ ಬೌನ್ಸರ್‌ಗಳನ್ನು ನಿಯೋಜಿಸಿದ್ದಾರೆ.

ಆದರೆ, ಅವರು ಎಷ್ಟು ಮೊತ್ತಕ್ಕೆ ಅವರನ್ನು ನೇಮಿಸಿಕೊಂಡರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು. "ಯಾರೂ ಉಚಿತವಾಗಿ ಬೌನ್ಸರ್‌ಗಳನ್ನು ನೇಮಕ ಮಾಡುವುದಿಲ್ಲ" ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಫೌಜಿ ಮತ್ತು ಅವರ ಬೌನ್ಸರ್‌ಗಳಿಗೆ ಸಂಬಂಧಿಸಿದ ಸುದ್ದಿ ಕ್ಲಿಪ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು "ಬಿಜೆಪಿಯು ಟೊಮೆಟೊಗಳಿಗೆ 'ಝೆಡ್-ಪ್ಲಸ್' ಭದ್ರತೆಯನ್ನು ನೀಡಬೇಕು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
 
ಟೊಮೆಟೊ ಪಕ್ಕದಲ್ಲೇ ನಿಂತುಕೊಂಡಿರುವ ಇಬ್ಬರು ಬೌನ್ಸರ್ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ. ಗ್ರಾಹಕರನ್ನು ಟೊಮೆಟೊ ಮುಟ್ಟಲು ಈ ಬೌನ್ಸರ್ ಬಿಡುತ್ತಿಲ್ಲ. ನಿಮಗೆ ಎಷ್ಟು ಟೊಮೆಟೊ ಬೇಕು ಅಷ್ಟನ್ನು ಮಾಲೀಕರ ಬಳಿ ಕೇಳಿ. ಅವರು ಕೊಡುತ್ತಾರೆ. ಸುಖಾಸುಮ್ಮನ ಟೊಮೆಟೊ ಮುಟ್ಟಿ ಹಾಳುಮಾಡಬೇಡಿ ಎಂದು ಬೌನ್ಸರ್ ಗದರಿಸುತ್ತಿರುವ ದೃಶ್ಯ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com