ಹಿಮಾಚಲ ಪ್ರದೇಶ: ಭೋರ್ಗರೆದು ಹರಿಯುತ್ತಿರುವ ನದಿ ನೀರಿನ ಮಧ್ಯೆ ಹಗ್ಗದ ಸಹಾಯದಿಂದ 28 ಮಂದಿಯ ರಕ್ಷಣೆ; ವಿಡಿಯೋ

ದೇಶದ ಅತ್ಯಂತ ಸುಂದರ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾದ ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಭಾರೀ ಮಳೆ, ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಜೀವ, ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ.
ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆ ಚಿತ್ರ
ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆ ಚಿತ್ರ

ಶಿಮ್ಲಾ: ದೇಶದ ಅತ್ಯಂತ ಸುಂದರ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾದ ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಭಾರೀ ಮಳೆ, ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಜೀವ, ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ.

ಈ ಮಧ್ಯೆ ರಾಜ್ಯದ ಕಾರಾ ಪ್ರದೇಶದ ಕಿನ್ನೌರ್‌ ನಲ್ಲಿ ನೀರಿನ ಮಧ್ಯೆ ಸಿಲುಕಿದ್ದ  28 ಮಂದಿಯನ್ನು ಎನ್ ಡಿಆರ್ ಎಫ್, ಐಟಿಬಿಟಿ ಮತ್ತು ಗೃಹ ರಕ್ಷಕ ದಳದ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಭೋರ್ಗರೆದು ಹರಿಯುತ್ತಿರುವ ನದಿ ನೀರಿನ ಮಧ್ಯೆ ಹಗ್ಗದ ಸಹಾಯದಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಎನ್ ಡಿಆರ್ ಎಫ್ ತಿಳಿಸಿದೆ. 

ಮತ್ತೊಂದೆಡೆ ಚಂದ್ರತಾಲ್ ನ ಹಿಮನದಿ ಬಳಿ ಸಿಲುಕಿದ್ದ ಏಳು ಚಾರಣಿಗರನ್ನು ಭಾರತೀಯ ವಾಯುಪಡೆ ರಕ್ಷಿಸಿದೆ. ಈ ಕುರಿತ ವಿಡಿಯೋವನ್ನು ಭಾರತೀಯ ವಾಯುಪಡೆ ಟ್ವೀಟ್ ಮಾಡಿದ್ದು, ಧೈರ್ಯಯುತ ರಕ್ಷಣಾ ಕಾರ್ಯಾಚರಣೆಯಲ್ಲಿ, ಕನಿಷ್ಠ ಹವಾಮಾನ ಮತ್ತು ಹಿಮನದಿಯ ಪರಿಸ್ಥಿತಿಯಲ್ಲಿ ಚಂದ್ರತಾಲ್ ಹಿಮನದಿ ಸರೋವರದ ಬಳಿಯಿಂದ ಏಳು ಚಾರಣಿಗರನ್ನು ರಕ್ಷಿಸಿರುವುದಾಗಿ ತಿಳಿಸಿದೆ. ಚಂದ್ರತಾಲ್ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com