ವಂಚಕರಿಂದ ಕಮಲ್ ನಾಥ್ ಫೋನ್ ಹ್ಯಾಕ್; ಪಕ್ಷದ ನಾಲ್ವರು ನಾಯಕರಿಗೆ ತಲಾ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ!

ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ಮೊಬೈಲ್ ಫೋನ್ ನ್ನು ವಂಚಕರು ಹ್ಯಾಕ್ ಮಾಡಿದ್ದು, ಪಕ್ಷದ ನಾಲ್ಕು ನಾಯಕರಿಗೆ ಕರೆ ಮಾಡಿ ಅವರಿಂದ ತಲಾ 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಕಮಲ್ ನಾಥ್
ಕಮಲ್ ನಾಥ್

ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ಮೊಬೈಲ್ ಫೋನ್ ನ್ನು ವಂಚಕರು ಹ್ಯಾಕ್ ಮಾಡಿದ್ದು, ಪಕ್ಷದ ನಾಲ್ಕು ನಾಯಕರಿಗೆ ಕರೆ ಮಾಡಿ ಅವರಿಂದ ತಲಾ 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಸ್ವತಃ ಪಕ್ಷದ ವಕ್ತಾರರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಕರೆ ಮಾಡಿ, ಮಾಲ್ವಿಯಾ ನಗರಕ್ಕೆ ಹಣ ಪಡೆಯಲು ಬಂದಿದ್ದ ಇಬ್ಬರನ್ನು ಕಾಂಗ್ರೆಸ್ ನ ಪದಾಧಿಕಾರಿಗಳು ಹಿಡಿದಿದ್ದಾರೆ, ಒಬ್ಬರೂ ಸಹ ಗುಜರಾತ್ ಮೂಲದವರೆಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಕೆಕೆ ಮಿಶ್ರಾ ಈ ಬಗ್ಗೆ ಪಿಟಿಐ ಗೆ ಮಾಹಿತಿ ನೀಡಿದ್ದು, ಆರೋಪಿ ಕಮಲ್ ನಾಥ್ ಅವರ ಫೋನ್ ನ್ನು ಹ್ಯಾಕ್ ಮಾಡಿ, ಆ ಮೂಲಕ ಎಂಎಲ್ಎ ಸತೀಶ್ ಸಿಕರ್ವಾರ್, ಖಜಾಂಚಿ ಅಶೋಕ್ ಸಿಂಗ್, ಇಂದೋರ್ ಸಿಟಿ ಕಾಂಗ್ರೆಸ್ ಅಧ್ಯಕ್ಷ ಸುರ್ಜಿತ್ ಸಿಂಗ್ ಚಡ್ಡಾ ಹಾಗೂ ಮಾಜಿ ಖಜಾಂಚಿ ಗೋವಿಂದ್ ಗೋಯಲ್ ಅವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅನುಮಾನಗೊಂಡ ಗೋಯಲ್, ವಿವರಗಳನ್ನು ಪದಾಧಿಕಾರಿಗಳಲ್ಲಿ ಪರಿಶೀಲಿಸಿದಾಗ ಈ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com