ಪಿತೂರಿಯಿಂದ ದೆಹಲಿಗೆ ಪ್ರವಾಹ ಪರಿಸ್ಥಿತಿ; ಬಿಜೆಪಿಯ ನಿಷ್ಕ್ರಿಯತೆಯನ್ನು ಆರೋಪಿಸಿದ ಆಮ್ ಆದ್ಮಿ ಪಕ್ಷ

ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದಕ್ಕೆ ಬಿಜೆಪಿಯ ಪಿತೂರಿಯೇ ಕಾರಣ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.
ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷ

ನವದೆಹಲಿ: ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದಕ್ಕೆ ಬಿಜೆಪಿಯ ಪಿತೂರಿಯೇ ಕಾರಣ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ. 

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಹರ್ಯಾಣ ಸರ್ಕಾರ ಉದ್ದೇಶಪೂರ್ವಕವಾಗಿ ರಾಷ್ಟ್ರರಾಜಧಾನಿಯತ್ತ ನೀರನ್ನು ಹರಿಸುತ್ತಿರುವುದು ಪ್ರವಾಹಕ್ಕೆ ಕಾರಣವಾಗಿದೆ ಎಂದು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದೆಹಲಿಯಲ್ಲಿ ಮಳೆ ಇಲ್ಲ 3-4 ದಿನಗಳಲ್ಲಿ ಮಳೆ ಇಲ್ಲ. ಆದರೂ ಯಮುನಾ ನದಿಯ ನೀರು 208.66 ಮೀಟರ್ ಗಳಷ್ಟು ಏರಿಕೆಯಾಗಿದೆ. 

ಹತ್ನಿಕುಂಡ್ ಬ್ಯಾರೇಜ್ ನಿಂದ 3 ಕಾಲುವೆಗಳು ನೀರು ಬಿಡುಗಡೆಯಾಗಿದ್ದು,     ಪಿತೂರಿಯ ಭಾಗವಾಗಿ ಜುಲೈ 9 ಹಾಗೂ 13 ರಂದು ಯಮುನಾ ಕಾಲುವೆಯಿಂದ ದೆಹಲಿಯೆಡೆಗೆ ಮಾತ್ರ ನೀರು ಬಿಡುಗಡೆ ಮಾಡಲಾಗಿತ್ತು. ಪಶ್ಚಿಮ ಹಾಗೂ ಪೂರ್ವ ಕಾಲುವೆಗಳಿಂದ ನೀರು ಬಿಡುಗಡೆ ಮಾಡಿಲ್ಲ ಎಂದು ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com