ಮಡಿಕೇರಿ: ಡ್ರಗ್ಸ್ ಹೊಂದಿದ್ದ ಪ್ರವಾಸಿಗರ ಬಂಧನ

ಡ್ರಗ್ಸ್ ಹೊಂದಿದ್ದ ಪ್ರವಾಸಿಗರನ್ನು ಕೊಡಗು ಜಿಲ್ಲೆಯ ಹೋಂ ಸ್ಟೇ ಯಿಂದ ಬಂಧಿಸಲಾಗಿದೆ.
ಬಂಧನ (ಸಂಗ್ರಹ ಚಿತ್ರ)
ಬಂಧನ (ಸಂಗ್ರಹ ಚಿತ್ರ)

ಕೊಡಗು: ಡ್ರಗ್ಸ್ ಹೊಂದಿದ್ದ ಪ್ರವಾಸಿಗರನ್ನು ಕೊಡಗು ಜಿಲ್ಲೆಯ ಹೋಂ ಸ್ಟೇ ಯಿಂದ ಬಂಧಿಸಲಾಗಿದೆ. ಒಟ್ಟು 16 ಮಂದಿ ಪ್ರವಾಸಿಗರನ್ನು ಬಂಧಿಸಲಾಗಿದ್ದು, ಮಕ್ಕಂದೂರು ತಾಲೂಕಿನಲ್ಲಿರುವ ಹೋಂ ಸ್ಟೇ ಈ ಘಟನೆ ನಡೆದಿದೆ. ಬಂಧಿತರ ಪೈಕಿ ಹೋಂ ಸ್ಟೇ ಮಾಲೀಕನೂ ಇದ್ದು, ಪೊಲೀಸರು ಎಲ್ ಎಸ್ ಡಿ ಡ್ರಗ್ಸ್ ಹಾಗೂ ಮರಿಜೌನವನ್ನು ವಶಕ್ಕೆ ಪಡೆದಿದ್ದಾರೆ. 

ಮಕ್ಕಂದೂರಿನ ಹೋಂ ಸ್ಟೇಗೆ 14 ಟೂರಿಸ್ಟ್ ಹುಡುಗರು ಬಂದಿದ್ದರು. ತಮಗೆ ಬಂದ ಮಾಹಿತಿಯ ಆಧಾರದಲ್ಲಿ ಪೊಲೀಸರು ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ಮಂಗಳೂರು ಮೂಲದ ಈ ಯುವಕರ ಪೈಕಿ 414 ಗ್ರಾಮ್ ಗಳಷ್ಟು ಗಾಂಜಾ ಹಾಗೂ 9 ಎಲ್ ಎಸ್ ಡಿಗಳನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹೃತಿಕ್ (23), ವಿಘ್ನೇಶ್ ಅಜಿತ್ (21), ಸುಮನ್ ಎಚ್ (26), ಚಿರಾಗ್ ಎಸ್ (24), ಮಂಜುನಾಥ್ (30), ಲತೀಶ್ ನಾಯಕ್ (32), ಸಚಿನ್ (26), ರಾಹುಲ್ (26), ಪ್ರಜ್ವಲ್ (32), ಅವಿನಾಶ್ (28), ಪ್ರತೀಕ್ ಕುಮಾರ್ (27), ಧನುಷ್ (28), ರಾಜೇಶ್ (45) ಮತ್ತು ದಿಲ್ರಾಜ್ (30) ಬಂಧಿತ ಯುವಕರಾಗಿದ್ದು, - ಎಲ್ಲರೂ, ಮಂಗಳೂರು ನಿವಾಸಿಗಳಾಗಿದ್ದಾರೆ. 

ಇವರೊಂದಿಗೆ ಹೋಂಸ್ಟೇ ಏಜೆಂಟ್ ಗಣೇಶ್ (47) ಮತ್ತು ಹೋಂಸ್ಟೇ ಮಾಲೀಕ ಸದಾಶಿವ ಬಿಎಚ್ (31) ಬಂಧಿತರಾಗಿದ್ದಾರೆ. ಇದೇ ವೇಳೆ ಸಿದ್ದಾಪುರ, ಗೋಣಿಕೊಪ್ಪಲು ಹಾಗೂ ಮಡಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾದಕ ದ್ರವ್ಯ ದಂಧೆಕೋರರನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಕೊಡಗು ಪೊಲೀಸರು ಒಟ್ಟು 1.70 ಗ್ರಾಂ ಗಾಂಜಾ ಮತ್ತು ಒಂಬತ್ತು ಎಲ್‌ಎಸ್‌ಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com