ಮಣಿಪುರ ಹಿಂಸಾಚಾರ ಕುರಿತು ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ: ಕಲಾಪ ಮಧ್ಯಾಹ್ನ 2-30ಕ್ಕೆ ಮುಂದೂಡಿಕೆ

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ರಾಜ್ಯಸಭೆಯಲ್ಲಿ ಇಂದು  ಗದ್ದಲ, ಕೋಲಾಹಲ ಉಂಟಾದ ನಂತರ ಕಡತದಿಂದ ಕೆಲ ಪದಗಳನ್ನು ಕಿತ್ತುಹಾಕಿದ ಸಭಾಪತಿ, ಕಲಾಪವನ್ನು ಮಧ್ಯಾಹ್ನ2-30ರವರೆಗೂ ಮುಂದೂಡಿದರು.
ರಾಜ್ಯಸಭೆ
ರಾಜ್ಯಸಭೆ

ನವದೆಹಲಿ: ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ರಾಜ್ಯಸಭೆಯಲ್ಲಿ ಇಂದು  ಗದ್ದಲ, ಕೋಲಾಹಲ ಉಂಟಾದ ನಂತರ ಕಡತದಿಂದ ಕೆಲ ಪದಗಳನ್ನು ಕಿತ್ತುಹಾಕಿದ ಸಭಾಪತಿ, ಕಲಾಪವನ್ನು ಮಧ್ಯಾಹ್ನ2-30ರವರೆಗೂ ಮುಂದೂಡಿದರು. ಗುರುವಾರದ ಕಲಾಪದ ಕಡತದಿಂದ ಕೆಲವು ಪದಗಳನ್ನು ತೆಗೆದುಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಡೆರೆಕ್ ಓ ಬ್ರಿಯಾನ್ ಪ್ರಶ್ನೆ ಎತ್ತಲು ಬಯಸುತ್ತಿದ್ದಂತೆಯೇ ಸಭಾಪತಿ ಜಗದೀಪ್ ಧನಕರ್ ಅವರು ಕಲಾಪವನ್ನು ಮುಂದೂಡಿದರು. 

ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ದಿನವು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಹಾಗೂ ಈಶಾನ್ಯ ರಾಜ್ಯದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊ ಬಗ್ಗೆ ಸರ್ಕಾರ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ವಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆಯೇ ಮೊದಲ ದಿನ ವ್ಯರ್ಥವಾದಾಗ ಆ ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆ ಕೋರಿ ಓ ಬ್ರಿಯಾನ್ ಮಾಡಿದ ಉಲ್ಲೇಖಗಳನ್ನು ಸಭಾಪತಿ ಕಡತದಿಂದ ತೆಗದುಹಾಕಿದರು. 

ಇಂದು ಕೂಡಾ ಆ ಪದಗಳನ್ನು ತೆಗೆದುಹಾಕುವ ಬಗ್ಗೆ ಪ್ರಶ್ನೆ ಎತ್ತಲು ಓಬ್ರಿಯಾನ್  ಪ್ರಯತ್ನಿಸಿದರು. ನಿನ್ನೆ ತಾವು ಮಾತನಾಡಿದ ಮೂರು ಪದಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.ಮಣಿಪುರದ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ನಾನು ಹೇಳಿರುವುದಾಗಿ ಪಾಯಿಂಟ್ ಆಫ್ ಅರ್ಡರ್ ನಲ್ಲಿ ಪದೇ ಪದೇ ತಾವು ಬಳಸಿದ ಪದಗಳ ಅರ್ಥವನ್ನು ವಿವರಿಸಲು ಅವರು ಪ್ರಯತ್ನಿಸುತ್ತಿದ್ದಂತೆ ಸದನ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಈ ಹಂತದಲ್ಲಿ ಸಭಾಪತಿ ಜಗದೀಪ್ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com