ರಾಜಸ್ಥಾನ: ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ; ಗೆಹ್ಲೋಟ್ ಶಾಸಕರಿಂದ ಹಲ್ಲೆ- ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಧಾ ಆರೋಪ

ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರಿಗೆ ಸೋಮವಾರ ಅವರ ಪಕ್ಷದ ಸಹೋದ್ಯೋಗಿಗಳು ರಾಜಸ್ಥಾನ ವಿಧಾನಸಭೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. 
ಮಾಜಿ ಸಚಿವ ರಾಜೇಂದ್ರ ಗುಧಾ
ಮಾಜಿ ಸಚಿವ ರಾಜೇಂದ್ರ ಗುಧಾ

ಜೈಪುರ: ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರಿಗೆ ಸೋಮವಾರ ಅವರ ಪಕ್ಷದ ಸಹೋದ್ಯೋಗಿಗಳು ರಾಜಸ್ಥಾನ ವಿಧಾನಸಭೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ವಿಧಾಸಭೆಗೆ ಹೋಗಲು ಪ್ರಯತ್ನಿಸುತ್ತಿದ್ದ ಗುಧಾ ಅವರನ್ನು ರಾಜಸ್ಥಾನ ಕಾಂಗ್ರೆಸ್ ನಾಯಕರು ತಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೂಧಾ, ತನ್ನ ಮೇಲೆ ಸುಮಾರು 50 ಮಂದಿ ಕಾಂಗ್ರೆಸ್ ಮುಖಂಡರು ದಾಳಿ ಮಾಡಿದ್ದು, ಕೈಯಿಂದ ಗುದಿದ್ದು, ಕಾಲಿನಿಂದ ಒದೆದಿದ್ದಾರೆ. ನಂತರ ವಿಧಾನಸಭೆಯಿಂದ ಹೊರಗೆ ಎಳೆದೊಯ್ದರು ಎಂದು ಆರೋಪಿಸಿದರು. ರಾಜಸ್ಥಾನ ವಿಧಾನಸಭೆಯ ಅಧ್ಯಕ್ಷರು ನನಗೆ ಮಾತನಾಡಲೂ ಅವಕಾಶ ನೀಡಲಿಲ್ಲ. ನಾನು ಬಿಜೆಪಿ ಜೊತೆ ಇದ್ದೇನೆ ಎಂದು ನನ್ನ ವಿರುದ್ಧ ಆರೋಪಗಳಿವೆ. ನನ್ನ ತಪ್ಪೇನು? ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಕಣ್ಣೀರು ಹಾಕಿದರು. 

ಸೈನಿಕ ಕಲ್ಯಾಣ್ , ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಗುಧಾ ಅವರನ್ನು ಶುಕ್ರವಾರ ಸಂಜೆ ಗೆಹ್ಲೋಟ್  ವಜಾಗೊಳಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಟಿಕೆಟ್ ಮೇಲೆ ಗೆದ್ದ ಆರು ಶಾಸಕರಲ್ಲಿ ಗುಧಾ ಕೂಡಾ ಒಬ್ಬರಾಗಿದ್ದು, 2021 ನವೆಂಬರ್ ನಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಸಚಿನ್ ಪೈಲಟ್ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಅವರು ಗೆಹ್ಲೋಟ್ ಬೆಂಬಲಿಸಿದ್ದರು. ಆದಾಗ್ಯೂ, ಕೆಲವು ತಿಂಗಳಿಂದ ಸಚಿನ್ ಪೈಲಟ್ ಪರ ಗುಧಾ ಹೇಳಿಕೆ ನೀಡುತ್ತಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com