718 ಮ್ಯಾನ್ಮಾರ್ ಪ್ರಜೆಗಳು ಅಕ್ರಮವಾಗಿ ಮಣಿಪುರಕ್ಕೆ ಪ್ರವೇಶ: ಹಿಂದಕ್ಕೆ ಕಳುಹಿಸುವಂತೆ ಅಸ್ಸಾಂ ರೈಫಲ್ಸ್‌ಗೆ ಸೂಚನೆ

301 ಮಕ್ಕಳು ಸೇರಿದಂತೆ ಕನಿಷ್ಠ 718 ಮ್ಯಾನ್ಮಾರ್ ಪ್ರಜೆಗಳು ಕಳೆದ ವಾರ ಈಶಾನ್ಯ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಣಿಪುರ ಸರ್ಕಾರ ಹೇಳಿದೆ.
ಅಸ್ಸಾಂ ರೈಫಲ್ಸ್ ಸಾಂದರ್ಭಿಕ ಚಿತ್ರ
ಅಸ್ಸಾಂ ರೈಫಲ್ಸ್ ಸಾಂದರ್ಭಿಕ ಚಿತ್ರ

ಇಂಫಾಲ್:  ಕಳೆದ ವಾರ 301 ಮಕ್ಕಳು ಸೇರಿದಂತೆ ಕನಿಷ್ಠ 718 ಮ್ಯಾನ್ಮಾರ್ ಪ್ರಜೆಗಳು ಈಶಾನ್ಯ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಣಿಪುರ ಸರ್ಕಾರ ಹೇಳಿದೆ. ಜುಲೈ 22 ಮತ್ತು 23 ರಂದು ಚಂದೇಲ್ ಜಿಲ್ಲೆಯಲ್ಲಿ ಅಕ್ರಮವಾಗಿ ರಾಜ್ಯ ಪ್ರವೇಶಿಸಿದವರ ಬಗ್ಗೆ ಭಾರತ-ಮ್ಯಾನ್ಮಾರ್ ಗಡಿ ಕಾವಲು ಪಡೆ ಅಸ್ಸಾಂ ರೈಫಲ್ಸ್‌ ನಿಂದ ವರದಿಯಾಗಿದೆ ಎಂದು ಗೃಹ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

 ಸರಿಯಾದ ಪ್ರಯಾಣದ ದಾಖಲೆಗಳಿಲ್ಲದೆ ಮ್ಯಾನ್ಮಾರ್ ಪ್ರಜೆಗಳು ಹೇಗೆ ಭಾರತ ಪ್ರವೇಶಿಸಲು ಅನುಮತಿ ನೀಡಲಾಯಿತು ಎಂಬ ಬಗ್ಗೆ ಅಸ್ಸಾಂ ರೈಫಲ್ಸ್ ಗೆ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಮಾಹಿತಿ ಕೋರಿದ್ದು, ಅವರನ್ನು ತಕ್ಷಣವೇ ಹಿಂದಕ್ಕೆ ತಳ್ಳುವಂತೆ ಒತ್ತಾಯಿಸಿದ್ದಾರೆ. 

718 ಹೊಸ ನಿರಾಶ್ರಿತರು ಭಾರತ-ಮ್ಯಾನ್ಮಾರ್ ಗಡಿಯನ್ನು ದಾಟಿ ನ್ಯೂ ಲಜಾಂಗ್‌ ಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಪ್ರಧಾನ ಕಛೇರಿ 28 ಸೆಕ್ಟರ್ ಅಸ್ಸಾಂ ರೈಫಲ್ಸ್‌ನಿಂದ ವರದಿಯನ್ನು ಸ್ವೀಕರಿಸಲಾಗಿದೆ ಎಂದು ಜೋಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 718 ಮ್ಯಾನ್ಮಾರ್ ಜನರಲ್ಲಿ 209 ಪುರುಷರು, 208 ಮಹಿಳೆಯರು ಮತ್ತು 301 ಮಕ್ಕಳು ಸೇರಿದ್ದಾರೆ.  ಜುಲೈ 22 ರಂದು ಹದಿಮೂರು, ಜುಲೈ 23 ರಂದು ಒಟ್ಟು 230 ಮ್ಯಾನ್ಮಾರ್ ಪ್ರಜೆಗಳು ಲಜಾಂಗ್ ಪ್ರದೇಶವನ್ನು ಪ್ರವೇಶಿಸಿದ್ದು, 89 ಮಂದಿ ನ್ಯೂ ಸಾಮ್ಟಾಲ್‌ಗೆ, 143 ಜನರು ಯಂಗ್ನೋಮ್‌ಫೈ ಗ್ರಾಮದಲ್ಲಿ, 175 ಜನರು ಯಂಗ್ನೋಮ್‌ಫೈ ಸಾ ಮಿಲ್‌ಗೆ, 30 ಐವೊಮ್‌ಜಾಂಗ್‌ಗೆ ಮತ್ತು 38 ಭೋನ್ಸ್‌ಗೆ ಆಗಮಿಸಿದ್ದಾರೆ ಎಂದು ಅದು ಹೇಳಿದೆ.

ಕೇಂದ್ರ ಗೃಹ ಸಚಿವಾಲಯದ ಸೂಚನೆಗಳ ಪ್ರಕಾರ ಮಾನ್ಯವಾದ ಪ್ರಯಾಣ ದಾಖಲೆಗಳಿಲ್ಲದೆ ಮ್ಯಾನ್ಮಾರ್ ಪ್ರಜೆಗಳು ಮಣಿಪುರಕ್ಕೆ ಪ್ರವೇಶಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗಡಿ ಕಾವಲು ಪಡೆಯಂತೆ ಅಸ್ಸಾಂ ರೈಫಲ್ಸ್‌ಗೆ ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ರಾಜ್ಯ ಸರ್ಕಾರವು ಕಾನೂನುಬಾಹಿರ ಪ್ರವೇಶವನ್ನು ಅತ್ಯಂತ ಸೂಕ್ಷ್ಮವಾಗಿ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಗೃಹ ಇಲಾಖೆ ತಿಳಿಸಿದೆ. ಮಣಿಪುರ ಮ್ಯಾನ್ಮಾರ್‌ನೊಂದಿಗೆ 398-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಮಣಿಪುರದ ಕುಕಿಗಳೊಂದಿಗೆ ಜನಾಂಗೀಯ ಸಂಬಂಧಗಳನ್ನು ಹಂಚಿಕೊಳ್ಳುವ ಚಿನ್ಸ್, ಮ್ಯಾನ್ಮಾರ್ ಭಾಗದಲ್ಲಿ ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com