ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ

ಕರ್ನಾಟಕ-ಗೋವಾ ಗಡಿಯ ಕ್ಯಾಸ್ಟೆಲ್ ರಾಕ್ ಬಳಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರಕ್ಕೆ ಅಡಚಣೇ ಉಂಟಾಗಿತ್ತು.
ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ
ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ

ಬೆಳಗಾವಿ: ಕರ್ನಾಟಕ-ಗೋವಾ ಗಡಿಯ ಕ್ಯಾಸ್ಟೆಲ್ ರಾಕ್ ಬಳಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರಕ್ಕೆ ಅಡಚಣೇ ಉಂಟಾಗಿತ್ತು.
 
ಆದರೆ ರೈಲ್ವೆ ಇಲಾಖೆ ಸಾಧ್ಯವಾದಷ್ಟೂ ಶೀಘ್ರವಾಗಿ ಕ್ರಮಗಳನ್ನು ಕೈಗೊಂಡಿದ್ದು, ರೈಲು ಸೇವೆಗಳು ಪುನಾರಂಭಗೊಳ್ಳುವಂತೆ ಮಾಡಿದೆ.
 
ಮೂಲಗಳ ಪ್ರಕಾರ ಬ್ರಗಾಂಜಾ ಘಾಟ್ ವಿಭಾಗದಲ್ಲಿ ಕ್ಯಾಸ್ಟಲ್ ರಾಕ್ ಹಾಗೂ ಕ್ಯಾರಂಝೋಲ್ ರೈಲು ನಿಲ್ದಾಣದ ನಡುವಿನ ಪ್ರದೇಶದಲ್ಲಿ ಈ ಭೂ ಕುಸಿತ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಪರಿಣಾಮ ಹಲವು ರೈಲುಗಳು ಒಂದೋ ರದ್ದುಗೊಂಡಿದ್ದವು ಇಲ್ಲವೇ ವೇಳೆಯಲ್ಲಿ ಬದಲಾವಣೆ ಕಂಡಿದ್ದವು.

ಜು.27 ರಂದು ತಿರುಪತಿ/ ಹೈದರಾಬಾದ್-ವಾಸ್ಕೋ ಡ ಗಾಮ ವೀಕ್ಲಿ ಎಕ್ಸ್ ಪ್ರೆಸ್ ರೈಲು ರದ್ದುಗೊಂಡಿದ್ದರೆ, ಜು. 28 ರಂದು  ವಾಸ್ಕೋ-ಡ ಗಾಮ- ತಿರುಪತಿ/ ಹೈದರಾಬಾದ್ ವೀಕ್ಲಿ ಎಕ್ಸ್ ಪ್ರೆಸ್ ಸಹ ರದ್ದುಗೊಂಡಿದೆ. ಯಶವಂತಪುರ- ವಾಸ್ಕೋ ಡ ಗಾಮ ಡೈಲಿ ಎಕ್ಸ್ ಪ್ರೆಸ್ ಜು.27-28 ರಂದು ರದ್ದುಗೊಂಡಿದೆ. ವಾಸ್ಕೋ ಡ ಗಾಮ- ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ಸಹ ಜು.27-28 ರಂದು ರದ್ದುಗೊಂಡಿದೆ

ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮ ಡೈಲಿ ಸೂಪರ್ ಫಾಸ್ಟ್ ರೈಲು ಹಜರತ್ ನಿಜಾಮುದ್ದೀನ್ ನಿಂದ ಹೊರಡಲಿದ್ದು ಜು. 26-27 ರಂದು ಬೆಳಗಾವಿ - ವಾಸ್ಕೋ ಡ ಗಾಮಾ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೆಳಗಾವಿ ಸ್ಟೇಷನ್ ನಲ್ಲಿ ನಿಲ್ಲಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com