ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆ ಗುರುವಾರದವರೆಗೂ ವಿಸ್ತರಣೆ

ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ನೀಡಲಾಗಿದ್ದ ತಡೆಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರದ ವರೆಗೂ ವಿಸ್ತರಿಸಿದೆ. 
ಜ್ಞಾನವಾಪಿ ಮಸೀದಿ  (ಸಂಗ್ರಹ ಚಿತ್ರ)
ಜ್ಞಾನವಾಪಿ ಮಸೀದಿ (ಸಂಗ್ರಹ ಚಿತ್ರ)

ಅಲಹಾಬಾದ್: ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ನೀಡಲಾಗಿದ್ದ ತಡೆಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರದ ವರೆಗೂ ವಿಸ್ತರಿಸಿದೆ. 

ಭಾರತೀಯ ಪುರಾತತ್ವ ಇಲಾಖೆಯಿಂದ ಈ ಸಮೀಕ್ಷೆ ನಡೆಯಬೇಕಿತ್ತು. ಸಮೀಕ್ಷೆಯನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂತೆಝಮಿಯಾ ಮಸೀದಿಯ ಅರ್ಜಿಯ ವಿಚಾರಣೆಯನ್ನು ಸಿಜೆ ಪ್ರೀತಿಂಕರ್ ದಿವಾಕರ್ ಗುರುವಾರಕ್ಕೆ ಮುಂದೂಡಿದ್ದಾರೆ. 

ಮುಂದಿನ ವಿಚಾರಣೆ ವರೆಗೂ ಎಎಸ್ಐ ಸಮೀಕ್ಷೆಗೆ ನೀಡಲಾಗಿರುವ ತಡೆ ಹಾಗೆಯೇ ಮುಂದುವರೆಯಲಿದೆ ಎಂದು ಕೋರ್ಟ್ ಹೇಳಿದೆ. ಮಧ್ಯಾಹ್ನ 3:30 ಕ್ಕೆ ವಿಚಾರಣೆ ನಡೆಯಲಿದೆ. ವಿಚಾರಣೆ ವೇಳೆ ಎಎಸ್ಐ ಅಧಿಕಾರಿಗಳನ್ನೂ ಕೋರ್ಟ್ ಗೆ ಕರೆಸಲಾಗಿತ್ತು. 

ಜುಲೈ 26 ರ ಸಂಜೆ 5 ಗಂಟೆಯವರೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಯಾವುದೇ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ASI) ಸಮೀಕ್ಷೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com