ನೌಶಾದ್-ಅಫ್ಸಾನಾ
ನೌಶಾದ್-ಅಫ್ಸಾನಾ

ಕೇರಳ: ಪತಿಯನ್ನು ಕೊಂದಿದ್ದಾಗಿ ಪತ್ನಿ ಒಪ್ಪಿಕೊಂಡ ಮರುದಿನ ಜೀವಂತವಾಗಿ ಕಾಣಿಸಿಕೊಂಡ ಗಂಡ!

ಪತಿಯನ್ನು ಕೊಂದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಮಹಿಳೆಯ ಪತಿ ಸುಮಾರು 130 ಕಿ.ಮೀ ದೂರದಲ್ಲಿ ಕೂಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ತಿರುವನಂತಪುರಂ: ಪತಿಯನ್ನು ಕೊಂದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಮಹಿಳೆಯ ಪತಿ ಸುಮಾರು 130 ಕಿ.ಮೀ ದೂರದಲ್ಲಿ ಕೂಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ಅಫ್ಸಾನಾ ಮತ್ತು ನೌಶಾದ್ ತಮ್ಮ ಇಬ್ಬರು ಮಕ್ಕಳೊಂದಿಗೆ ಆಡೂರಿನಲ್ಲಿ ವಾಸಿಸುತ್ತಿದ್ದರು. 2021ರ ಡಿಸೆಂಬರ್ ನಲ್ಲಿ ಕಳೆದ ಒಂದು ತಿಂಗಳಿಂದ ತನ್ನ ಪತಿ ಕಾಣೆಯಾಗಿದ್ದಾನೆ ಎಂದು ಮಹಿಳೆ ಹೇಳಿದಾಗ ಆಕೆಯ ಸಂಬಂಧಿಕರು ಕಾಣೆಯಾದ ದೂರನ್ನು ದಾಖಲಿಸಿದರು.

ಕೆಲವು ದಿನಗಳ ಹಿಂದೆ ನೌಶಾದ್‌ನನ್ನು ನೋಡಿರುವುದಾಗಿ ಮಹಿಳೆ ಹೇಳಿಕೊಂಡಿದ್ದಳು. ನಂತರ ಸ್ಥಳೀಯ ಪೊಲೀಸರು ಕಳೆದ ವಾರ ಅಫ್ಸಾನಾ ಅವರನ್ನು ವಿಚಾರಣೆಗೆ ಕರೆದರು. ಆದರೆ ಮತ್ತಷ್ಟು ವಿಚಾರಿಸಿದಾಗ ತನ್ನ ಪತಿಯನ್ನು ಕೊಂದು ಹೂತಿಟ್ಟಿರುವುದಾಗಿ ತಿಳಿಸಿದ್ದಳು. ಈ ಸಂಬಂಧ ಗುರುವಾರ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು.

ಆಕೆ ತನ್ನ ಗಂಡನ ಶವವನ್ನು ಹೂಳಿರುವುದಾಗಿ ಹೇಳಿಕೊಂಡ ಆಕೆಯ ಮನೆ ಸೇರಿದಂತೆ ಕೆಲವು ಸ್ಥಳಗಳಲ್ಲಿ ಪೊಲೀಸರು ಅಗೆದರು, ಆದರೆ ಏನೂ ಕಂಡುಬಂದಿಲ್ಲ. ಪೊಲೀಸರು ಅಫ್ಸಾನಾ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿರುವಾಗ, ಶುಕ್ರವಾರ ನೌಶಾದ್ ತೊಡುಪುಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ.

ವಿಚಾರಣೆ ವೇಳೆ ನೌಶಾದ್, ಪತ್ನಿ ಅಫ್ಸಾನಾ ಮತ್ತು ಇತರರು ತನ್ನನ್ನು ಥಳಿಸಿದ ಬಳಿಕ ಅಡೂರಿನಿಂದ ಓಡಿ ಹೋಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಅವಳ ಜೊತೆ ಇರಲು ನನಗೆ ಭಯವಾಗುತ್ತಿದೆ ಎಂದು ನೌಶಾದ್ ಹೇಳಿದ್ದಾರೆ. ನಾನು ನವೆಂಬರ್ 2021ರಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಬಳಿ ಮೊಬೈಲ್ ಫೋನ್ ಇಲ್ಲ ಮತ್ತು ಅಫ್ಸಾನಾ ಬಗ್ಗೆ ನನ್ನ ಬಳಿ ಯಾವುದೇ ಸುದ್ದಿ ಇಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಪೊಲೀಸ್ ಪ್ರೋಟೋಕಾಲ್ ಪ್ರಕಾರ, ನೌಶಾದ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅಡೂರ್ ಬಳಿಯ ಕೂಡಲ್ ಪೊಲೀಸರು ಅವರನ್ನು ನಾಪತ್ತೆ ಪ್ರಕರಣ ದಾಖಲಿಸಿರುವ ಅಡೂರಿಗೆ ಕರೆದೊಯ್ಯಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com