ಮಣಿಪುರದಲ್ಲಿ ಬೃಹತ್ ಪ್ರತಿಭಟನೆ
ಮಣಿಪುರದಲ್ಲಿ ಬೃಹತ್ ಪ್ರತಿಭಟನೆ

ಮಣಿಪುರದಲ್ಲಿ ಬೃಹತ್ ಪ್ರತಿಭಟನೆ: ಎನ್‌ಆರ್‌ಸಿ, ಚಿನ್-ಕುಕಿ ನಾರ್ಕೋ-ಉಗ್ರರ ವಿರುದ್ಧ ಕ್ರಮಕ್ಕೆ ಆಗ್ರಹ

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶನಿವಾರ ಸಾವಿರಾರು ಜನ ರಾಜಧಾನಿ ಇಂಫಾಲ್‌ನಲ್ಲಿ "ಚಿನ್-ಕುಕಿ ನಾರ್ಕೋ-ಭಯೋತ್ಪಾದಕರ" ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
Published on

ಗುವಾಹಟಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶನಿವಾರ ಸಾವಿರಾರು ಜನ ರಾಜಧಾನಿ ಇಂಫಾಲ್‌ನಲ್ಲಿ "ಚಿನ್-ಕುಕಿ ನಾರ್ಕೋ-ಭಯೋತ್ಪಾದಕರ" ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಮೈಟೈಸ್ ಮತ್ತು ಕುಕಿಗಳ ನಡುವಿನ ಸುಮಾರು ಮೂರು ತಿಂಗಳಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಡ್ರಗ್ಸ್ ಅನ್ನು ವ್ಯಾಪಕವಾಗಿ ಬಳಸಲಾಗಿದೆ. ಹಿಂಸಾಚಾರದಿಂದ ಸುಮಾರು 150 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 50,000 ಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.

"ಚಿನ್-ಕುಕಿ ನಾರ್ಕೋ-ಭಯೋತ್ಪಾದನೆ ವಿರುದ್ಧ ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಒಂದು ಲಕ್ಷಕ್ಕೂ ಹೆಚ್ಚು ಜನ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇಂಫಾಲ್‌ನಲ್ಲಿ ನಡೆದ ಅತಿ ದೊಡ್ಡ ಪ್ರತಿಭಟನೆ ಇದಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಜನ ಸೇರಿದ್ದನ್ನು ನಾವು ನೋಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಹಿಂಸಾಚಾರದ ಸ್ಫೋಟದ ನಂತರ "ಚಿನ್-ಕುಕಿ ನಾರ್ಕೋ-ಭಯೋತ್ಪಾದನೆ" ವಿರುದ್ಧ ದನಿಯೆತ್ತಿದ ಮಣಿಪುರ ಸಮಗ್ರತೆ ಸಮನ್ವಯ ಸಮಿತಿ(COCOMI) ಈ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿತ್ತು. 

ಪ್ರತಿಭಟನಾಕಾರರು ಐದು ನಿರ್ಣಯಗಳನ್ನು ಅಂಗೀಕರಿಸಿದ್ದು,  ಪ್ರಸ್ತುತ ಸಂಘರ್ಷವನ್ನು ಕೊನೆಗೊಳಿಸಬೇಕು. ವಿದೇಶಿ "ಚಿನ್-ಕುಕಿ ನಾರ್ಕೋ-ಭಯೋತ್ಪಾದಕರ" "ನಿರ್ಮೂಲನೆ" ಮಾಡಬೇಕು. ಕುಕಿಗಳ ಪ್ರತ್ಯೇಕ ಆಡಳಿತ ಬೇಡಿಕೆಯನ್ನು ತಿರಸ್ಕರಿಸಬೇಕು ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಅಥವಾ NRC ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com