ಕಾಂಗ್ರೆಸ್‌ನ ʻಗ್ಯಾರಂಟಿ ಸೂತ್ರʼಗಳು ದೇಶವನ್ನು ದಿವಾಳಿಯನ್ನಾಗಿಸುತ್ತದೆ: ಪ್ರಧಾನಿ ಮೋದಿ

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳು ದೇಶವನ್ನು ದಿವಾಳಿಯಾಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳು ದೇಶವನ್ನು ದಿವಾಳಿಯಾಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಿನ್ನೆ ಅವರು ರಾಜಸ್ಥಾನದ ಅಜ್ಮೇರ್​ನಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿ, ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿರುವ ಕರ್ನಾಟಕಕ್ಕೆ ಕಾಂಗ್ರೆಸ್‌ನ ಐದು ಭರವಸೆಗಳ ಬಗ್ಗೆ ಮಾತನಾಡಿತ್ತು. ಕಾಂಗ್ರೆಸ್ ನ ಖಾತರಿಗಳು ದೇಶವನ್ನು ದಿವಾಳಿಯಾಗಿಸುತ್ತದೆ' ಎಂದಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರವು ಉಚಿತ ವಿದ್ಯುತ್‌ನಿಂದ ಅಗ್ಗದ ಅಡುಗೆ ಅನಿಲದವರೆಗೆ ಸಮಾಜ ಕಲ್ಯಾಣ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

ಐವತ್ತು ವರ್ಷಗಳ ಹಿಂದೆ, ಕಾಂಗ್ರೆಸ್ ಬಡತನವನ್ನು ತೊಡೆದುಹಾಕುತ್ತದೆ ಎಂದು ಭರವಸೆ ನೀಡಿತು. ಆದರೆ, ಇದು ಬಡವರಿಗೆ ಅವರ ದೊಡ್ಡ ದ್ರೋಹವಾಗಿದೆ. ಬಡವರನ್ನು ದಾರಿ ತಪ್ಪಿಸುವುದು ಮತ್ತು ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ ರಾಜಸ್ಥಾನದ ಜನರು ಸಹ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜಸ್ಥಾನಕ್ಕೆ ಏನು ಸಿಕ್ಕಿದೆ, ಶಾಸಕರು, ಸಿಎಂ ಮುಖ್ಯಮಂತ್ರಿ ಮತ್ತು ಮಂತ್ರಿಗಳು ತಮ್ಮ ತಮ್ಮಲ್ಲೇ ಜಗಳವಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ ಸರ್ಕಾರವು ಜನರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. 2014ಕ್ಕಿಂತ ಮೊದಲು ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು. ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರ ನಡೆಸುತ್ತಿದ್ದಾಗ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿದ್ದವು. 100 ಪೈಸೆಯಲ್ಲಿ ಕೇವಲ 15 ಪೈಸೆ ಬಡವರಿಗೆ ತಲುಪುತ್ತಿದೆ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಳೆಯ ಕಾಮೆಂಟ್ ಅನ್ನು ಉಲ್ಲೇಖಿಸಿ, 'ಕಾಂಗ್ರೆಸ್ ದೇಶದ ರಕ್ತವನ್ನು ಹೀರುವ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಭ್ರಷ್ಟ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು' ಎಂದು ಹೇಳಿದರು.

ಈಗ, ಜಗತ್ತು ಭಾರತದ ಬಗ್ಗೆ ಮಾತನಾಡುತ್ತಿದೆ. ತೀವ್ರ ಬಡತನವನ್ನು ಕೊನೆಗೊಳಿಸಲು ಭಾರತವು ಬಹಳ ಹತ್ತಿರದಲ್ಲಿದೆ ಎಂದು ತಜ್ಞರು ಹೇಳುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com