ಒಡಿಶಾ ರೈಲು ಅಪಘಾತ: 48 ರೈಲುಗಳು ರದ್ದು, 39 ರೈಲುಗಳ ಮಾರ್ಗ ಬದಲಾವಣೆ

ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ತ್ರಿವಳಿ ರೈಲುಗಳ ಭೀಕರ ಅಪಘಾತದಲ್ಲಿ 288 ಜನ ಸಾವನ್ನಪ್ಪಿದ್ದು, ದುರಂತದ ನಂತರ ದಕ್ಷಿಣ ಮತ್ತು ಆಗ್ನೇಯ ರೈಲ್ವೆ ವಲಯಗಳಲ್ಲಿ ಸುಮಾರು 48 ರೈಲುಗಳನ್ನು ರದ್ದುಗೊಳಿಸಲಾಗಿದೆ...
ಒಡಿಶಾ ರೈಲು ದುರಂತದ ಚಿತ್ರ
ಒಡಿಶಾ ರೈಲು ದುರಂತದ ಚಿತ್ರ

ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ತ್ರಿವಳಿ ರೈಲುಗಳ ಭೀಕರ ಅಪಘಾತದಲ್ಲಿ 288 ಜನ ಸಾವನ್ನಪ್ಪಿದ್ದು, ದುರಂತದ ನಂತರ ದಕ್ಷಿಣ ಮತ್ತು ಆಗ್ನೇಯ ರೈಲ್ವೆ ವಲಯಗಳಲ್ಲಿ ಸುಮಾರು 48 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು 39 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ 10 ರೈಲುಗಳನ್ನು ಅಲ್ಪಾವಧಿಗೆ ಸ್ಥಗಿತಗೊಳಿಸಲಾಗಿದೆ.

ಎರಡು ವಲಯಗಳು ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಆಗ್ನೇಯ ರೈಲ್ವೆಯು ಜೂನ್ 3 ರಂದು ಪ್ರಯಾಣ ಆರಂಭಿಸಬೇಕಿದ್ದ ಚೆನ್ನೈ-ಹೌರಾ ಮೇಲ್, ದರ್ಭಾಂಗ-ಕನ್ನಿಯಾಕುಮಾರಿ ಎಕ್ಸ್‌ಪ್ರೆಸ್ ಮತ್ತು ಕಾಮಾಕ್ಯ-ಎಲ್‌ಟಿಟಿ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಇನ್ನು ಜೂನ್ 4 ರಂದು ಪ್ರಯಾಣ ಆರಂಭಿಸಬೇಕಿದ್ದ ಪಟ್ನಾ-ಪುರಿ ವಿಶೇಷ ರೈಲನ್ನು ಸಹ ರದ್ದುಗೊಳಿಸಲಾಗಿದೆ.

ದಕ್ಷಿಣ ರೈಲ್ವೆಯು ಜೂನ್ 3 ರಂದು 23.00 ಗಂಟೆಗೆ ಮಂಗಳೂರಿನಿಂದ ಹೊರಡುವ ಮಂಗಳೂರು-ಸಂತ್ರಗಾಚಿ ವಿವೇಕ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಜೂನ್ 4 ರಂದು 07.00 ಗಂಟೆಗೆ ಚೆನ್ನೈನಿಂದ ಹೊರಡುವ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಶಾಲಿಮಾರ್ ಕೋರಮಂಡಲ್ ಎಕ್ಸ್‌ಪ್ರೆಸ್, ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸಂತ್ರಗಾಚಿ ಎಸಿ ಸೂಪರ್‌ಫಾಸ್ಟ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com