2024 ರ ಲೋಕಸಭಾ ಚುನಾವಣೆಗೆ ಆಯೋಗ ತಯಾರಿ: ಇವಿಎಂಗಳ ಪರಿಶೀಲನೆ 

2024 ರ ಲೋಕಸಭಾ ಚುನಾವಣೆ ಹಾಗೂ ವರ್ಷಾಂತ್ಯಕ್ಕೆ ನಡೆಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ  ಚುನಾವಣಾ ಆಯೋಗ ತಯಾರಿ ನಡೆಸಿದೆ.
ಲೋಕಸಭಾ ಚುನಾವಣೆಗೆ ಆಯೋಗ ತಯಾರಿ
ಲೋಕಸಭಾ ಚುನಾವಣೆಗೆ ಆಯೋಗ ತಯಾರಿ

ನವದೆಹಲಿ: 2024 ರ ಲೋಕಸಭಾ ಚುನಾವಣೆ ಹಾಗೂ ವರ್ಷಾಂತ್ಯಕ್ಕೆ ನಡೆಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ  ಚುನಾವಣಾ ಆಯೋಗ ತಯಾರಿ ನಡೆಸಿದೆ.

ತಯಾರಿಯ ಭಾಗವಾಗಿ, ಇವಿಎಂಗಳ ಪ್ರಾಥಮಿಕ ಹಂತದ ಪರಿಶೀಲನೆ (ಎಫ್ ಎಲ್ ಸಿ )ಯನ್ನು ಚುನಾವಣಾ ಆಯೋಗ ದೇಶಾದ್ಯಂತ ಹಂತ ಹಂತವಾಗಿ ಕೈಗೊಂಡಿದೆ. ಅಣಕು ಮತದಾನ ಎಫ್ಎಲ್ ಸಿಯ ಭಾಗವಾಗಿದೆ. ಇದು ದೇಶಾದ್ಯಂತ ನಡೆಯುವ ಚಟುವಟಿಕೆಯಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. 

ರಾಜಸ್ಥಾನ, ಮಿಜೋರಾಂ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ಸೇರಿದಂತೆ ಸಾರ್ವತ್ರಿಕ ಹಾಗೂ ಉಪಚುನಾವಣೆಗಳು ನಡೆಯಲಿರುವ ವಿಧಾನಸಭಾ ಮತ್ತು ಸಂಸದೀಯ ಸ್ಥಾನಗಳಲ್ಲಿ ಎಫ್‌ಎಲ್‌ಸಿಗಳು ನಡೆಯಲಿವೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
 
ಒಂದು ವೇಳೆ ಮತಯಂತ್ರಗಳಲ್ಲಿ ದೋಷವಿದ್ದರೆ ಅದನ್ನು ಬದಲಾವಣೆ ಮಾಡಲು ಉತ್ಪಾದಕರಿಗೇ ವಾಪಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com