ಮಹಾರಾಷ್ಟ್ರ: ಅಕ್ರಮವಾಗಿ ನಿರ್ಮಿಸಿದ ಟಿಪ್ಪು ಸುಲ್ತಾನ್ ಸ್ಮಾರಕ ಧ್ವಂಸ!

ಮಹಾರಾಷ್ಟ್ರದ ಧುಲೆ ಟ್ರಾಫಿಕ್ ಜಂಕ್ಷನ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರ ಸ್ಮಾರಕವನ್ನು ನಾಗರಿಕ ಸೇವಾ ಸಂಸ್ಥೆ ಧ್ವಂಸಗೊಳಿಸಿದೆ.
ಟಿಪ್ಪು ಸುಲ್ತಾನ್ ಸ್ಮಾರಕ
ಟಿಪ್ಪು ಸುಲ್ತಾನ್ ಸ್ಮಾರಕ
Updated on

ಧುಲೆ: ಮಹಾರಾಷ್ಟ್ರದ ಧುಲೆ ಟ್ರಾಫಿಕ್ ಜಂಕ್ಷನ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರ ಸ್ಮಾರಕವನ್ನು ನಾಗರಿಕ ಸೇವಾ ಸಂಸ್ಥೆ ಧ್ವಂಸಗೊಳಿಸಿದೆ.

ಮುಂಬೈನಿಂದ ಸುಮಾರು 322 ಕಿ. ಮೀ. ದೂರದಲ್ಲಿರುವ ಧುಲೆ ನಗರದ ವಡ್ಜೈ ರಸ್ತೆಯ ಇಂಟರ್ ಜಂಕ್ಷನ್ ನಲ್ಲಿ ಆಲ್ ಇಂಡಿಯಾ ಇತ್ತೆಹಾದುಲ್ ಮಜ್ಲಿಸ್-ಎ-ಮುಸ್ಲಿಮೀನ್ ಶಾಸಕ ಫಾರೂಕ್ ಶಾ ಅನ್ವರ್ ಇದನ್ನು ನಿರ್ಮಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಪೊಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ಅದನ್ನು ಕೆಡವಲಾಯಿತು. ಶಾಸಕರೇ ಅದನ್ನು ತೆಗೆಯುವಂತೆ ತಿಳಿಸಿದ್ದರು.ಆದರೆ, ಜಿಲ್ಲಾಧಿಕಾರಿ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳ ಸಭೆಯ ನಂತರ ಸ್ಮಾರಕವನ್ನು ನೆಲಸಮಗೊಳಿಸಲಾಯಿತು ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com