MSPಗೆ ಆಗ್ರಹಿಸಿ ರೈತರ ಪ್ರತಿಭಟನೆಯಲ್ಲಿ ಕುಸ್ತಿಪಟು ಬಜರಂಗ್ ಪುನಿಯಾ ಭಾಗಿ

ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪಿಪ್ಲಿಯಲ್ಲಿ ಸೂರ್ಯಕಾಂತಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳಿಗೆ ಒತ್ತಾಯಿಸಿ ಸೋಮವಾರ ರೈತರು ನಡೆಸುತ್ತಿರುವ ಮಹಾಪಂಚಾಯತ್‌ನಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್...
ಬಜರಂಗ್ ಪುನಿಯಾ
ಬಜರಂಗ್ ಪುನಿಯಾ

ಕುರುಕ್ಷೇತ್ರ: ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪಿಪ್ಲಿಯಲ್ಲಿ ಸೂರ್ಯಕಾಂತಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳಿಗೆ ಒತ್ತಾಯಿಸಿ ಸೋಮವಾರ ರೈತರು ನಡೆಸುತ್ತಿರುವ ಮಹಾಪಂಚಾಯತ್‌ನಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರು ಭಾಗವಹಿಸಿದ್ದಾರೆ.

ವಿವಿಧ ರೈತ ಸಂಘಗಳ ನಾಯಕರು ಮತ್ತು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಕುಸ್ತಿಪಟು ಬಜರಂಗ್ ಪುನಿಯಾ ಅವರು ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದಾರೆ.

"ನಾವು ರೈತರನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ನಾವು ರೈತ ಕುಟುಂಬದಿಂದ ಬಂದಿದ್ದೇವೆ. ನಾವು ರಸ್ತೆಯಲ್ಲಿ ನಿಂತಿರುವ ರೈತರೊಂದಿಗೆ ನಾವು ನಿಲ್ಲುತ್ತೇವೆ. ರೈತರ ಪ್ರತಿಭಟನೆಯ ಸಂದರ್ಭದಲ್ಲೂ ನಾವು ರೈತರಿಗೆ ಬೆಂಬಲ ನೀಡಿದ್ದೇವೆ ಮತ್ತು ನಾವು ಅವರನ್ನು ಬೆಂಬಲಿಸುತ್ತೇವೆ" ಎಂದು ಬಜರಂಗ್ ಪುನಿಯಾ ಅವರು ಹೇಳಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್(ಚಾರುಣಿ) ಕರೆ ನೀಡಿರುವ "ಎಂಎಸ್‌ಪಿ ದಿಲಾವೋ, ಕಿಸಾನ್ ಬಚಾವೋ ಮಹಾಪಂಚಾಯತ್" ರಾಷ್ಟ್ರೀಯ ಹೆದ್ದಾರಿ-44 ರ ಸಮೀಪವಿರುವ ಪಿಪ್ಲಿಯ ಧಾನ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. 

"ನಾವು ಹೆದ್ದಾರಿ ತಡೆ ಮಾಡುವುದಿಲ್ಲ ಎಂದಿರುವ ರಾಕೇಶ್ ಟಿಕಾಯತ್ ಅವರು, ಪ್ರಮುಖವಾಗಿ ನಮ್ಮ ಎರಡು ಬೇಡಿಕೆಗಳು, ಒಂದು ಬಂಧಿತ ರೈತರನ್ನು ಬಿಡುಗಡೆ ಮಾಡಬೇಕು ಮತ್ತು ಎಂಎಸ್‌ಪಿ ಅಡಿ ಸೂರ್ಯಕಾಂತಿ ಬೀಜಗಳನ್ನು ಖರೀದಿಸಲು ಪ್ರಾರಂಭಿಸಬೇಕು. ಈ ಸಂಬಂಧ ನಾವು ಸರ್ಕಾರದೊಂದಿಗೆ ಚರ್ಚೆಗೆ ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com