ಛತ್ತೀಸ್‌ಗಢ: ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಕ್ಸಲ್ ಪೀಡಿತ ಗ್ರಾಮದ ಆದಿವಾಸಿಗಳಿಗೆ ಸಿಕ್ತು ವೋಟರ್ ಐಡಿ!

ಆದರೆ ರಾಯ್‌ಪುರದಿಂದ ದಕ್ಷಿಣಕ್ಕೆ 380 ಕಿಮೀ ದೂರದಲ್ಲಿರುವ ಬಸ್ತಾರ್‌ನ ದೂರದ ಮಾವೋವಾದಿ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು 75 ವರ್ಷದ ನಂತರ ಮೊದಲ ಬಾರಿಗೆ ಮತದಾನದ ಗುರುತಿನ ಚೀಟಿ ಪಡೆದಿದ್ದಾರೆ.
ಆದಿವಾಸಿಗಳಿಗೆ ವೋಟರ್ ಐಡಿ ನೀಡಿದ ಜಿಲ್ಲಾಡಳಿತ
ಆದಿವಾಸಿಗಳಿಗೆ ವೋಟರ್ ಐಡಿ ನೀಡಿದ ಜಿಲ್ಲಾಡಳಿತ

ರಾಯ್ ಪುರ: ಭಾರತ ದೇಶ 75 ನೇ ಸ್ವಾತಂತ್ರ್ಯ ದಿನಾಚರಣೆ  ಅಂಗವಾಗಿ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ. ಆದರೆ ರಾಯ್‌ಪುರದಿಂದ ದಕ್ಷಿಣಕ್ಕೆ 380 ಕಿಮೀ ದೂರದಲ್ಲಿರುವ ಬಸ್ತಾರ್‌ನ ದೂರದ ಮಾವೋವಾದಿ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು 75 ವರ್ಷದ ನಂತರ ಮೊದಲ ಬಾರಿಗೆ ಮತದಾನದ ಗುರುತಿನ ಚೀಟಿ ಪಡೆದಿದ್ದಾರೆ.

ಗಾಂಪುರ್ ಗ್ರಾಮದ 233 ಆದಿವಾಸಿಗಳು ಮೊದಲ ಬಾರಿಗೆ ವೋಟರ್ ಐ ಡಿ ಪಡೆದಿದ್ದಾರೆ. ಗಾಂಪುರ ನಿವಾಸಿಗಳನ್ನು ತಲುಪುವುದು ಬಿಜಾಪುರ ಆಡಳಿತಕ್ಕೆ ಸುಲಭದ ಕೆಲಸವಾಗಿರಲಿಲ್ಲ. ಅಲ್ಲಿನ ಜನರು ಕೇವಲ ಅನಕ್ಷರಸ್ಥರು ಮಾತ್ರವಲ್ಲ ಅವರ ಬಳಿ  ಮೊಬೈಲ್ ಫೋನ್ ಅಥವಾ ಆಧಾರ್ ಕಾರ್ಡ್ ಯಾವುದು ಇಲ್ಲ.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ನಂತರ, ಗಾಂಪುರ ಗ್ರಾಮಸ್ಥರು ಈಗ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಸ್ಥಳೀಯ ಸಾಪ್ತಾಹಿಕ ಹಾತ್ ಬಜಾರ್‌ನಂತಹ ಅನುಕೂಲಕರ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ನಾವು ಮಾವೋವಾದಿಗಳ ಭದ್ರಕೋಟೆಗಳಲ್ಲಿರುವ ಅಂತಹ ಆದಿವಾಸಿಗಳ ಆವಾಸಸ್ಥಾನಗಳನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಜಾಪುರ ಕಲೆಕ್ಟರ್ ರಾಜೇಂದ್ರ ಕಟಾರ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಾವೋವಾದಿಗಳ ಪ್ರಮುಖ ಕೇಂದ್ರಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದವರಿಗೆ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿಗಳನ್ನು ಜಿಲ್ಲಾಡಳಿತ ಪಡೆದುಕೊಂಡಿದೆ, ಇದರಿಂದಾಗಿ ಅವರು ಛತ್ತೀಸ್‌ಗಢದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಮತದಾರರ ಗುರುತಿನ ಚೀಟಿ ಜತೆಗೆ ಗ್ರಾಮಸ್ಥರಿಗೆ ಆಧಾರ್, ಪಡಿತರ ಚೀಟಿ, ಆಯುಷ್ಮಾನ್, ಲೇಬರ್ ಕಾರ್ಡ್ ವಿತರಿಸಲಾಯಿತು.

ಬಿಜಾಪುರ ಜಿಲ್ಲಾಡಳಿತದ ಪ್ರಕಾರ, ಮತದಾರರ ಗುರುತಿನ ಚೀಟಿ ಇಲ್ಲದ ಇಂತಹ ಬುಡಕಟ್ಟು ಗ್ರಾಮಗಳು ಇನ್ನೂ ಇವೆ. ಎಡಪಂಥೀಯ ಉಗ್ರಗಾಮಿಗಳ ಪ್ರಭಾವದಿಂದ ಈ ರೀತಿ  ಆಗಿರಬಹುದು.  ಅಂತವರನ್ನು ತಲುಪಲು ಆಡಳಿತ ಯೋಜಿಸಿದೆ. ಚುನಾವಣೆ ಬಹಿಷ್ಕಾರಕ್ಕೆ ಮಾವೋವಾದಿಗಳ ಕರೆಗಳ ಸವಾಲಿನ ಹೊರತಾಗಿಯೂ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನಗಳು ಮುಂದುವರೆದಿದೆ.

ಜಿಲ್ಲೆಯ ಶೇಕಡಾ 40 ರಷ್ಟು ಪ್ರದೇಶ ಎಡಪಂಥೀಯ ಉಗ್ರಗಾಮಿಗಳ ಹಿಡಿತದಲ್ಲಿ ಉಳಿದಿದೆ ಎಂದು ಬಿಜಾಪುರದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ, ಇದರ ಪರಿಣಾಮವಾಗಿ ಯಾವುದೇ ಕಾರ್ಯಕ್ರಮ ಅಥವಾ ಯೋಜನೆಗೆ ಮಾವೋವಾದಿಗಳಿಂದ ಸೂಚಿತ ಒಪ್ಪಿಗೆ ಅಗತ್ಯವಿದೆ.

ದೂರದ ಬಸ್ತಾರ್‌ನಲ್ಲಿರುವ ಶಿಬಿರವನ್ನು ತಲುಪಲು ಸ್ಥಳೀಯ ಬುಡಕಟ್ಟು ನಿವಾಸಿಗಳು ಸುಮಾರು 20-25 ಕಿ.ಮೀ. ಕ್ರಮಿಸಿಬೇಕಾಗಿತ್ತು.  ಬಿಜಾಪುರದ ಗಾಂಪುರ್ ಆದಿವಾಸಿಗಳು ಪಕ್ಕದ ದಾಂತೇವಾಡ ಜಿಲ್ಲೆಯ ಕಿರಾಂಡುಲ್‌ನಲ್ಲಿ ಶಿಬಿರಕ್ಕೆ ಹಾಜರಾಗುವುದು ಸಾಹಸದ ಕೆಲಸವೇ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com