

ಭೋಪಾಲ್: ಒಂಬತ್ತು ತಿಂಗಳ ಹಿಂದೆ ಖರೀದಿಸಿದ 5.5 ಕೋಟಿ ರೂಪಾಯಿ ಮೌಲ್ಯದ ಸುಧಾರಿತ ಅಗ್ನಿಶಾಮಕ ಹೈಡ್ರಾಲಿಕ್ ಲ್ಯಾಡರ್ ಭೋಪಾಲ್‌ನ ಏಳು ಅಂತಸ್ತಿನ ಸಾತ್ಪುರ ಭವನದಿಂದ 40 ಮೀಟರ್ ದೂರದಲ್ಲಿ ಬಳಕೆಯಾಗದೆ ಬಿದ್ದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸುಮಾರು ಒಂಬತ್ತು ತಿಂಗಳ ಹಿಂದೆ 18 ಅಂತಸ್ತಿನ ಎತ್ತರದ ಕಟ್ಟಡಗಳಲ್ಲಿ ಬೆಂಕಿಯ ವಿರುದ್ಧ ಹೋರಾಡುವುದಕ್ಕೆ ನೆರವಾಗಲೆಂದು ಹೆಚ್ಚು ಸಂಭ್ರಮದಿಂದ ಹೈಡ್ರಾಲಿಕ್ ಲ್ಯಾಡರ್ ಅನ್ನು ಖರೀದಿಸಲಾಗಿತ್ತು. ಆದರೆ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಅರ್ಹ ಸಿಬ್ಬಂದಿಯ ಅನುಭವದ ಕೊರತೆಯಿಂದಾಗಿ ಹೋರಾಟದಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂಬುದು ಖಚಿತಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭೋಪಾಲ್‌ನಲ್ಲಿ ಅತಿದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದು ಬೆಂಕಿಯನ್ನು ನಂದಿಸಲು ಸೇನೆ ಮತ್ತು ಭಾರತೀಯ ವಾಯುಸೇನೆ ತೊಡಗಿತ್ತು ಎಂದರು.
ಭೋಪಾಲ್‌ನ ಸಾತ್ಪುರ ಭವನದ ಮೇಲಿನ ನಾಲ್ಕು ಮಹಡಿಗಳಲ್ಲಿ ಸಂಭವಿಸಿದ ಭಾರೀ ಬೆಂಕಿಯನ್ನು ಸುಮಾರು 17 ಗಂಟೆಗಳಲ್ಲಿ ನಂದಿಸಲಾಯಿತು. ಇದು ವಿಧಾನಸಭಾ ಚುನಾವಣೆಗೆ ಒಳಪಟ್ಟಿರುವ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅಗ್ನಿ ಅವಘಡ 'ರಾಜ್ಯ ಪ್ರಾಯೋಜಿತ, ಯೋಜಿತ, ಅಸಹಜ ಮತ್ತು ಮಾನವ ನಿರ್ಮಿತ ಬೆಂಕಿ' ಎಂದು ಆರೋಪಿಸಿದೆ. ಆರೋಗ್ಯ ಮತ್ತು ಇತರ ಇಲಾಖೆಗಳಲ್ಲಿನ ಹಗರಣಗಳಿಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ಯೋಜಿತ ರೀತಿಯಲ್ಲಿ ಬೆಂಕಿ ಇಟ್ಟು ನಾಶಪಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯ ಪಕ್ಷದ ಮುಖ್ಯಸ್ಥ ಕಮಲ್ ನಾಥ್, ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ.ಮಿಶ್ರಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳು ಇರುವ ಮೊದಲು ಸರ್ಕಾರಿ ಕಟ್ಟಡದಲ್ಲಿ ಬೆಂಕಿ ಏಕೆ ಸಂಭವಿಸಿತು ಎಂದು ಪ್ರಶ್ನಿಸಿದ್ದು ಅಗ್ನಿ ಅವಘಡದ ಬಗ್ಗೆ ಸ್ವತಂತ್ರ ಸಂಸ್ಥೆ ಅಥವಾ ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಅಗ್ನಿ ಅವಘಡದ ಬಗ್ಗೆ ತನಿಖೆ ನಡೆಸಲು ಸಿಎಂ ಅವರು ಸದನ ಸಮಿತಿಯನ್ನು ರಚಿಸುವ ಬದಲು ಅಧಿಕಾರಶಾಹಿಗಳ ಸಮಿತಿಯನ್ನು ಏಕೆ ರಚಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ, ಅದರಲ್ಲಿ ವಿರೋಧ ಪಕ್ಷದ ನಾಯಕರೂ ಇರಬೇಕಿತ್ತು ಎಂದು ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ ಪ್ರಶ್ನಿಸಿದ್ದಾರೆ.
ಭಾರತೀಯ ಸೇನೆ ತಡರಾತ್ರಿ ಬಂದ ನಂತರವೇ ಬೆಂಕಿಯನ್ನು ನಿಯಂತ್ರಿಸಲಾಯಿತು. ಆದರೆ ಸಿಎಂ ಸೇನೆಗೆ ಕರೆ ಮಾಡಲು ಇಷ್ಟು ಸಮಯ ತೆಗೆದುಕೊಂಡಿದ್ದೇಕೆ, ರಕ್ಷಣಾ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಯುವ ಬದಲು ಅಗ್ನಿ ಅವಘಡದ ಕಾರಣಗಳನ್ನು ತಿಳಿಯಲು ತನಿಖಾ ಸಮಿತಿಯನ್ನು ರಚಿಸುವುದಕ್ಕೆ ಅವರು ಆದ್ಯತೆ ನೀಡಿದರು. ಯಾವುದೇ ಮಹತ್ವದ ಕಡತ ಸುಟ್ಟು ಹೋಗಿಲ್ಲ ಎಂದು ರಾಜ್ಯದ ಗೃಹ ಸಚಿವರು ಹೇಳುತ್ತಿದ್ದರೆ, ಆರೋಗ್ಯ ಇಲಾಖೆಯ ಸಾವಿರಾರು ಪ್ರಮುಖ ಕಡತಗಳು ಸುಟ್ಟು ಕರಕಲಾಗಿವೆ ಎಂದು ಹಿರಿಯ ಆರೋಗ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಹೇಳುತ್ತಿದ್ದಾರೆ. ಸಚಿವರು ಹೇಳುವುದಕ್ಕೂ ಮಹಿಳಾ ಅಧಿಕಾರಿಯೊಬ್ಬರು ಹೇಳುವುದಕ್ಕೂ ವ್ಯತ್ಯಾಸ ಏಕೆ ಕಾಂಗ್ರೆ್ಸ ಪ್ರಶ್ನಿಸಿದೆ.
Advertisement