ನಾಸಿಕ್: ಗೋವುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯ ಮೇಲೆ ಗೋರಕ್ಷಕರಿಂದ ಹಲ್ಲೆ, ಥಳಿತ!

ಗೋವುಗಳನ್ನು ಸಾಗಣೆ ಮಾಡುತ್ತಿದ್ದ 23 ವರ್ಷದ ವ್ಯಕ್ತಿಯೋರ್ವನನ್ನು ಗೋರಕ್ಷಕರು ಹಲ್ಲೆ ಮಾಡಿ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. 
ಗೋವುಗಳು
ಗೋವುಗಳು
Updated on

ನಾಸಿಕ್:  ಗೋವುಗಳನ್ನು ಸಾಗಣೆ ಮಾಡುತ್ತಿದ್ದ 23 ವರ್ಷದ ವ್ಯಕ್ತಿಯೋರ್ವನನ್ನು ಗೋರಕ್ಷಕರು ಹಲ್ಲೆ ಮಾಡಿ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. 

ಲುಕ್ಮನ್ ಅನ್ಸಾರಿ ದೇಹ ಘಟಾನ್ದೇವಿಯ ಇಗತ್ಪುರಿ ಪ್ರದೇಶದಲ್ಲಿರುವ ಕೊರಕಲು ಇರುವ ಜಾಗದಲ್ಲಿ ಪತ್ತೆಯಾದಾಗ ಜೂ.10 ರಂದು ಈ ಅಪರಾಧ ಕೃತ್ಯ ಬೆಳಕಿಗೆ ಬಂದಿದೆ. ಈ ವರೆಗೂ 6 ಗೋರಕ್ಷಕರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಎಲ್ಲಾ ಆರೋಪಿಗಳೂ ರಾಷ್ಟ್ರೀಯ ಬಜರಂಗದಳದೊಂದಿಗೆ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅನ್ಸಾರಿ ತನ್ನ ಇಬ್ಬರು ಸಹಾಯಕರೊಂದಿಗೆ ಜೂನ್ 8 ರಂದು ತಮ್ಮ ಟೆಂಪೋದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಥಾಣೆ ಜಿಲ್ಲೆಯ ಸಹಪುರ್‌ನ ವಿಹಿಗಾಂವ್‌ನಲ್ಲಿ ಸುಮಾರು 10-15 ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿದ್ದರು. ಬಳಿಕ ಟೆಂಪೋವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಈ ಗುಂಪು, ನಾಲ್ಕು ಹಸುಗಳನ್ನು ರಕ್ಷಿಸಿದ್ದಾರೆ ಬಳಿಕ ವಾಹನವನ್ನು ಘಟಾನ್ದೇವಿಯ ಇಗತ್ಪುರಿ ಕಡೆಗೆ ಚಾಲನೆ ಮಾಡಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಟೆಂಪೋವನ್ನು ನಿಲ್ಲಿಸಿ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಅನ್ಸಾರಿ ಜೊತೆಯಲ್ಲಿದ್ದವರು ಹಲ್ಲೆಯಿಂದ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರೆ, ಅನ್ಸಾರಿ ಸಿಕ್ಕಿಬಿದ್ದಿದ್ದಾರೆ. ಕೊರಕಲು ಪ್ರದೇಶದಲ್ಲಿ ಬಿದ್ದ ಪರಿಣಾಮ ಅನ್ಸಾರಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಗಳು ಹೇಳಿದ್ದರೆ, ಆತ ಥಳಿತದಿಂದಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಸೇರಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com