ಭಾರತೀಯ ಕ್ರೀಡೆಗೆ ಇಂದು 'ಕರಾಳ ದಿನ': ಬ್ರಿಜ್ ಭೂಷಣ್ ವಿರುದ್ಧದ ಕೇಸ್ ರದ್ದತಿಗೆ ಕಾಂಗ್ರೆಸ್ ಕಿಡಿ

ಭಾರತೀಯ ಕ್ರೀಡಾ ಒಕ್ಕೂಟ(WFI)ದ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಪ್ರಾಪ್ತ ಕುಸ್ತಿಪಟು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ...
ಪ್ರತಿಭಟನಾನಿರತ ಕುಸ್ತಿಪಟುಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರ ಚಿತ್ರ
ಪ್ರತಿಭಟನಾನಿರತ ಕುಸ್ತಿಪಟುಗಳನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರ ಚಿತ್ರ

ನವದೆಹಲಿ: ಭಾರತೀಯ ಕ್ರೀಡಾ ಒಕ್ಕೂಟ(WFI)ದ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಪ್ರಾಪ್ತ ಕುಸ್ತಿಪಟು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಇಂದು ಭಾರತೀಯ ಕ್ರೀಡೆಗಳಿಗೆ 'ಕರಾಳ ದಿನ ಎಂದು ಕಾಂಗ್ರೆಸ್ ಅಕ್ರೋಶ ವ್ಯಕ್ತಪಡಿಸಿದೆ.

ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಭಾರತದ ಹೆಣ್ಣು ಮಕ್ಕಳ ಕೂಗನ್ನು ಮೋದಿ ಸರ್ಕಾರ ಕಸದ ಬುಟ್ಟಿಗೆ ಹಾಕಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬಿಜೆಪಿಯ ಹೊಸ ಘೋಷಣೆಯು "ಬೇಟಿ ದಾರಾವ್, ಬ್ರಿಜ್ ಭೂಷಣ್ ಬಚಾವೋ" ಆಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದಾರೆ.

ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಜೂನ್ 15 ರೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು, ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು.

"ಹೆಣ್ಣುಮಕ್ಕಳನ್ನು ಹೆದರಿಸಿ, ಬ್ರಿಜ್ ಭೂಷಣ್ ಉಳಿಸಿ' ಎಂಬುದು ನಿಜವಾದ ಘೋಷಣೆ. ಇಂದು ಭಾರತೀಯ ಕ್ರೀಡೆಗೆ 'ಕರಾಳ ದಿನ'. ಇಂದು ಬಿಜೆಪಿಯ ರಾಜಕೀಯದ ಬುಲ್ಡೋಜರ್ ಅಡಿಯಲ್ಲಿ ದೇಶದ ಕಾನೂನು ಪುಡಿಪುಡಿಯಾಗಿದೆ. ಇಂದು ಭಾರತದ ಹೆಣ್ಣುಮಕ್ಕಳ 'ನ್ಯಾಯಕ್ಕಾಗಿ ಕೂಗು' ಕಸದ ಬುಟ್ಟಿ ಸೇರಿದೆ ಮತ್ತು ಸಮಾಧಿ ಮಾಡಿದೆ ಎಂದು ಅವರು ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com