ನೈಟಿ ಧರಿಸಂಗಿಲ್ಲ- ಲುಂಗಿ ಸುತ್ಕೊಂಡು ಓಡಾಡಂಗಿಲ್ಲ: ವಿಲಕ್ಷಣ ಷರತ್ತು ವಿಧಿಸಿದ ಹೌಸಿಂಗ್ ಸೊಸೈಟಿ

ಈಗ ಹಳ್ಳಿಗಳಿಂದ ಹಿಡಿದು ಮೆಟ್ರೋ ಸಿಟಿಗಳವರೆಗೆ, ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರವರೆಗೂ ಹೆಂಗಸರು ನೈಟಿ ಹಾಗೂ  ಗಂಡಸರು ಲುಂಗಿ ಹಾಕಿಕೊಳ್ಳುವುದು ಎಲ್ಲಾ ಕಡೆ ಕಾಮನ್ ಆಗಿಬಿಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೋಯ್ಡಾ: ಈಗ ಹಳ್ಳಿಗಳಿಂದ ಹಿಡಿದು ಮೆಟ್ರೋ ಸಿಟಿಗಳವರೆಗೆ, ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರವರೆಗೂ ಹೆಂಗಸರು ನೈಟಿ ಹಾಗೂ ಗಂಡಸರು ಲುಂಗಿ ಹಾಕಿಕೊಳ್ಳುವುದು ಎಲ್ಲಾ ಕಡೆ ಕಾಮನ್ ಆಗಿಬಿಟ್ಟಿದೆ. ಈ ರೀತಿಯಾಗಿ ನಮ್ಮ ದೇಶದ ಅನೇಕ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಡ್ರೆಸ್ ಕೋಡ್ ಸಾರ್ವತ್ರಿಕವಾಗಿದೆ.

ಆದರೆ ಸಾಮಾನ್ಯ ಪ್ರದೇಶಗಳು ಮತ್ತು ಉದ್ಯಾನವನಗಳಲ್ಲಿ ಸುತ್ತಾಡುವಾಗ ಇಂತಿಂಥ ಉಡುಗೆ ಮಾತ್ರ ಧರಿಸಬೇಕು ಎಂದು ಗ್ರೇಟರ್ ನೋಯ್ಡಾದ ಸೊಸೈಟಿ ನಿವಾಸಿಗಳ ಕಲ್ಯಾಣ ಸಂಘ ತನ್ನ ನಿವಾಸಿಗಳನ್ನು ಒತ್ತಾಯಿಸಿದೆ.

ಹಿಮ್ಸಾಗರ್ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಜೂನ್ 10 ರಂದು ಹೊರಡಿಸಿದ ಸುತ್ತೋಲೆಯೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲುಂಗಿ ಮತ್ತು ನೈಟಿ ಧರಿಸಿ ತಮ್ಮ ಫ್ಲಾಟ್‌ಗಳಿಂದ ಹೊರಬರದಂತೆ ನಿವಾಸಿಗಳಿಗೆ ನೋಟಿಸ್‌ನಲ್ಲಿ ವಿನಂತಿಸಲಾಗಿದೆ.

ಆದರೆ ಅಲ್ಲಿ ಇಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ಇದು ಸಂಪೂರ್ಣ ವಿರುದ್ಧವಾಗಿದೆ. ಗ್ರೇಟರ್ ನೋಯ್ಡಾದ ಸೆಕ್ಟರ್ ಎಫ್ 2 ನಲ್ಲಿರುವ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಕಾಲೋನಿಯ ನಿವಾಸಿಗಳು ಫ್ಲಾಟ್‌ನಿಂದ ಹೊರಗೆ ಬರುವಾಗ ಲುಂಗಿ ಮತ್ತು ನೈಟಿಗಳನ್ನು ಧರಿಸದಂತೆ ಸುತ್ತೋಲೆ ಹೊರಡಿಸಿದೆ. ನಿಮ್ಮ ಮಕ್ಕಳು ಕೂಡ ನಿಮ್ಮಿಂದ ಕಲಿಯುತ್ತಾರೆ. ಹಾಗಾಗಿ ಮನೆಗಳಲ್ಲಿ ಧರಿಸುವ ಲುಂಗಿ ಅಥವಾ ನೈಟಿಯನ್ನು ಹೊರಾಂಗಣದಲ್ಲಿ ಬಳಸಬಾರದು ಎಂದು ಮನವಿ ಮಾಡಲಾಗಿದೆ''.

ಸೆಕ್ಟರ್-2 ರಲ್ಲಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನ ಅಭಿಪ್ರಾಯವೆಂದರೆ ದೆಹಲಿಯಲ್ಲಿ ಹೆಚ್ಚಿನ ಜನರು ಸಂಜೆಯ ಸಮಯವನ್ನು ಮನೆಯ ಬದಲು ಉದ್ಯಾನವನಗಳು ಮತ್ತು ಅಪಾರ್ಟ್ಮೆಂಟ್ ತೋಟಗಾರಿಕಾ ಪ್ರದೇಶಗಳಲ್ಲಿ ಕಳೆಯಲು ಬರುತ್ತಾರೆ. ಹೊರಗೆ ಹೋಗಬಯಸುವವರು ಹೆಂಗಸಾಗಿದ್ದರೆ ನೈಟಿ, ಪುರುಷರಾದರೆ ಲುಂಗಿ ಧರಿಸಬಾರದು ಎಂದು ನಿಯಮ ರೂಪಿಸಲಾಗಿದೆ.

ಮನೆಯ ಬದಲು ಫ್ಲಾಟ್‌ನಿಂದ ಹೊರಗೆ ಬರುವಾಗ ಬೇರೆಯವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪುರುಷರು ಲುಂಗಿ ಧರಿಸದೇ ಇದ್ದರೆ ಮತ್ತು ಮಹಿಳೆಯರು ನೈಟಿ ಹಾಕಿಕೊಂಡು ಬರದೇ ಇದ್ದರೆ ಒಳ್ಳೆಯದು. ಆದರೆ ಕೆಲವು ನಿವಾಸಿಗಳು ಈ ನಿಟ್ಟಿನಲ್ಲಿ ಸುತ್ತೋಲೆಯನ್ನು ಸ್ವಾಗತಿಸಿದರೆ, ಅನೇಕರು ಬಟ್ಟೆಗಳು ವೈಯಕ್ತಿಕ ವಿಷಯ, ಇದರ ಮೇಲೆ ಹೇರಿಕೆ ಸರಿಯಲ್ಲ ಎಂದು ಟೀಕಿಸಿದ್ದಾರೆ.

ನೋಟೀಸ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು  ವ್ಯಕ್ತ ಪಡಿಸಿದ್ದಾರೆ. ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜನರು ತಮ್ಮ ಸ್ವಂತ ಕಾಂಪೌಂಡ್‌ನಲ್ಲಿರುವ ಮನೆಗಳಲ್ಲಿ ಏನು ಧರಿಸಬೇಕೆಂದು ಅವರು ಏಕೆ ನಿರೀಕ್ಷಿಸುತ್ತಾರೆ? ಅವರಿಗೆ ಭಾರತೀಯ ಹವಾಮಾನದ ಬಗ್ಗೆ ಏನಾದರೂ ಕಲ್ಪನೆ ಇದೆಯೇ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಈ ನೋಟಿಸ್ ಆದೇಶವಲ್ಲ, ವಿನಂತಿಯಾಗಿದೆ. ಲುಂಗಿ ಹಾಕಿಕೊಂಡು ಕುಳಿತಿರುವರ ಬಗ್ಗೆ ಓಡಾಡುತ್ತಿದ್ದ ಬಗ್ಗೆ ಸಮಾಜದ ಹಲವಾರು ಮಹಿಳಾ ನಿವಾಸಿಗಳಿಂದ ದೂರುಗಳು ಬಂದಿವೆ. ಸೊಸೈಟಿ ಕೈಗೊಂಡಿರುವ ಉತ್ತಮ ನಿರ್ಧಾರ ಇದಾಗಿದ್ದು, ಇದನ್ನು ಎಲ್ಲರೂ ಗೌರವಿಸಬೇಕು, ವಿರೋಧಿಸಲು ಏನೂ ಇಲ್ಲ. ಮಹಿಳೆಯರು ನೈಟಿಗಳನ್ನು ಧರಿಸಿ ತಿರುಗಾಡಿದರೆ ಅದು ಪುರುಷರಿಗೆ ಅನಾನುಕೂಲವಾಗಿರುತ್ತದೆ. ಪುರುಷರು ಲುಂಗಿಗಳನ್ನು ಧರಿಸಿದರೆ ಅದು ಮಹಿಳೆಯರಿಗೆ ಅನಾನುಕೂಲವಾಗಿರುತ್ತದೆ, ಆದ್ದರಿಂದ ನಾವು ಪರಸ್ಪರ ಗೌರವಿಸಬೇಕು ಎಂದು ಆರ್‌ಡಬ್ಲ್ಯೂಎ ಅಧ್ಯಕ್ಷ ಸಿಕೆ ಕಲ್ರಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com