ಶವ ಸಾಗಿಸಲು ದುಪ್ಪಟ್ಟು ಹಣಕ್ಕೆ ಬೇಡಿಕೆ: ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್‌ನಲ್ಲಿ ಸಾಗಿಸಿದ ತಂದೆ!

ತಂದೆಯೊಬ್ಬರು ತಮ್ಮ ನವಜಾತ ಮಗುವಿನ ಮೃತ ದೇಹವನ್ನು ಚೀಲದಲ್ಲಿ ಸುತ್ತಿ ಬಸ್ ನಲ್ಲಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮೃತ ನವಜಾತ ಶಿಶುವನ್ನು ಸಾಗಿಸಿದ ತಂದೆ
ಮೃತ ನವಜಾತ ಶಿಶುವನ್ನು ಸಾಗಿಸಿದ ತಂದೆ
Updated on

ಜಬಲ್ಪುರ: ತಂದೆಯೊಬ್ಬರು ತಮ್ಮ ನವಜಾತ ಮಗುವಿನ ಮೃತ ದೇಹವನ್ನು ಚೀಲದಲ್ಲಿ ಸುತ್ತಿ ಬಸ್ ನಲ್ಲಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಶವ ಸಾಗಾಣೆಗೆ ವಾಹನ ಬೇಕು ಎಂದು ಪೋಷಕರು ಒತ್ತಾಯಿಸಿದರು. ಆದರೆ ಆಡಳಿತ ಮಂಡಳಿ ವಾಹನ ನೀಡಲು ನಿರಾಕರಿಸಿತು. ಹೀಗಾಗಿ ತಂದೆ ನವಜಾತ ಶಿಶುವಿನ ಮೃತದೇಹವನ್ನು ಚೀಲದಿಂದ ಸುತ್ತಿ ಬಸ್ ನಿಲ್ದಾಣದ ಕಡೆ ನಡೆದರು. ಅಲ್ಲಿಂದ ಬಸ್ ಹತ್ತಿ ದಿಂಡೋರಿಗೆ ತಲುಪಿದರು.

ಹೃದಯವು ದಾರಿಯುದ್ದಕ್ಕೂ ಅಳುತ್ತಲೇ ಇತ್ತು. ಆದರೆ ತಂದೆಯ ಕಣ್ಣಲ್ಲಿ ನೀರು ಬರಲು ಬಿಡಲಿಲ್ಲ. ಬಸ್ಸಿನ ಪ್ರಯಾಣಿಕರಿಗೆ ಈ ವಿಷಯ ತಿಳಿದಿದ್ದರೆ ತನ್ನನ್ನು ಬಸ್ಸಿನಿಂದ ಇಳಿಸಬಹುದು ಎಂಬ ಕಾರಣಕ್ಕೆ ಎದೆಯ ಮೇಲೆ ಕಲ್ಲು ಹಾಕಿಕೊಂಡು ಕುಳಿತಿದ್ದರು.

ದಿಂಡೋರಿಯ ಸಹಜ್‌ಪುರಿ ನಿವಾಸಿ ಸುನೀಲ್ ಧುರ್ವೆ ಅವರು ತಮ್ಮ ಪತ್ನಿ ಜಮ್ನಿ ಬಾಯಿ ಜೂನ್ 13 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶು ದೈಹಿಕವಾಗಿ ದುರ್ಬಲವಾಗಿತ್ತು. ಜೂನ್ 14ರಂದು ವೈದ್ಯರು ಅವರನ್ನು ಜಬಲ್ಪುರ ವೈದ್ಯಕೀಯ ಆಸ್ಪತ್ರೆಗೆ ಶಿಫಾರಸು ಮಾಡಿದರು. ಜಬಲ್ಪುರದಲ್ಲಿ ಜೂನ್ 15ರಂದು ಚಿಕಿತ್ಸೆ ಫಲಕಾರಿಯಾಗದೆ ನವಜಾತ ಶಿಶು ಸಾವನ್ನಪ್ಪಿತು. ನವಜಾತ ಶಿಶುವಿನ ಮೃತ ದೇಹವನ್ನು ಮತ್ತೆ ದಿಂಡೋರಿಗೆ ತರಬೇಕಾಗಿತ್ತು. ಮೃತದೇಹ ನೀಡುವಂತೆ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದರೂ ಒಪ್ಪದ ಕಾರಣ ಮೃತದೇಹವನ್ನು ಬ್ಯಾಗ್‌ನಲ್ಲಿಟ್ಟು ತಂದಿದ್ದಾರೆ.

ಆರ್ಥಿಕವಾಗಿ ದುರ್ಬಲರಾಗಿರುವ ಸುನೀಲ್ ಧುರ್ವೆ ಅವರು ವೈದ್ಯಕೀಯ ಕಾಲೇಜಿನಿಂದ ಮೃತದೇಹ ಪಡೆದು ಖಾಸಗಿ ವಾಹನದ ದರ ವಿಚಾರಿಸಿದಾಗ ನಾಲ್ಕೈದು ಸಾವಿರ ರೂಪಾಯಿ ಅಂತ ಹೇಳಿದ್ದರು. ಇದರಿಂದಾಗಿ ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿಕೊಂಡು ಜಬಲ್ಪುರದಿಂದ ದಿಂಡೋರಿಗೆ ಬಸ್ಸಿನಲ್ಲಿ ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com