ಲೋಕಸಭಾ ಚುನಾವಣೆ: ಆರ್‌ಎಸ್‌ಎಸ್ ವರಿಷ್ಠರ ಭೇಟಿ; ಸಂಘಪರಿವಾರದ ಬೆಂಬಲ ಕೋರಿದ ಬಿ ಎಲ್ ಸಂತೋಷ್

ಕೊಚ್ಚಿಗೆ ಎರಡು ದಿನಗಳ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್, ಹಿರಿಯ ಆರ್‌ಎಸ್‌ಎಸ್ ನಾಯಕರನ್ನು ಭೇಟಿ ಮಾಡಿದರು.
ಬಿ.ಎಲ್ ಸಂತೋಷ್
ಬಿ.ಎಲ್ ಸಂತೋಷ್

ಕೊಚ್ಚಿ: ಕೊಚ್ಚಿಗೆ ಎರಡು ದಿನಗಳ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್, ಹಿರಿಯ ಆರ್‌ಎಸ್‌ಎಸ್ ನಾಯಕರನ್ನು ಭೇಟಿ ಮಾಡಿದರು.

ಈ ವೇಳೆ  2024 ರ ಲೋಕಸಭೆ ಚುನಾವಣೆಗೆ ಸಂಘ ಪರಿವಾರದ ಬೆಂಬಲ ಕೋರಿದ್ದಾರೆ . ಪಕ್ಷದ ಚುನಾವಣಾ ಕಾರ್ಯತಂತ್ರದ ಕುರಿತು ಆರ್‌ಎಸ್‌ಎಸ್‌ನಿಂದ ಸಲಹೆ ನೀಡಬೇಕೆಂದು ಕೋರಿದ ಅವರು, ತಪ್ಪು ತಿಳುವಳಿಕೆಗಳನ್ನು ದೂರ ಮಾಡಿ ಜನತೆಗೆ ಸ್ಪಷ್ಟತೆ ನೀಡಬೇಕೆಂದು ಹೇಳಿದ್ದಾರೆ.

ಬಿಜೆಪಿಯು ಸಂಘಪರಿವಾರದ ಎಲ್ಲಾ ಸಂಘಟನೆಗಳನ್ನು ಚುನಾವಣಾ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ, "ಕೇರಳ ಜಿಂಕ್ಸ್" ಮುರಿಯಲು ಬಿಜೆಪಿ ಆಶಿಸುತ್ತಿದೆ ಎಂದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಮತ್ತು ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರ.

ಶನಿವಾರ ಪ್ರಾರಂಭವಾಗುವ ಆರ್‌ಎಸ್‌ಎಸ್‌ನ ಎರಡು ದಿನಗಳ ‘ಬೈಠಕ್’ (ಸಭೆ)  ಮಹತ್ವದ್ದಾಗಿದೆ.  ಸಭೆಯಲ್ಲಿ ಆರ್‌ಎಸ್‌ಎಸ್ ಸಹ ಸರ್ಕಾರಿವಾಹ ಅರುಣ್‌ಕುಮಾರ್ ಬೈಠಕ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ 20 ರಂದು, ಬಿಜೆಪಿ 10 ದಿನಗಳ ಸಾಮೂಹಿಕ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ಇದರಲ್ಲಿ ಪಕ್ಷದ ತಂಡಗಳು ರಾಜ್ಯಾದ್ಯಂತ ಮನೆಮನೆಗಳಿಗೆ ಭೇಟಿ ನೀಡಲಿವೆ. ಅವರು ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾರೆ ಮತ್ತು ಅಲ್ಲಿನ ಜನರ ಬೆಂಬಲ ಕೋರುತ್ತಾರೆ.

ಸಂತೋಷ್ ಅವರು ಬಿಜೆಪಿಯ ಜನಸಂಪರ್ಕ ಕಾರ್ಯಕ್ರಮದಲ್ಲೂ ತೊಡಗಿಸಿಕೊಂಡರು. ತ್ರಿಪುನಿತುರಂನಲ್ಲಿರುವ ನಿವಾಸದಲ್ಲಿ ಗಾಯಕ ಮಧು ಬಾಲಕೃಷ್ಣನ್ ಅವರನ್ನು ಭೇಟಿ ಮಾಡಿದ ಅವರು ನಂತರ ರಾಜ್ಯ ಬುದ್ದಿಜೀವಿಗಳ ಸಭೆಯಲ್ಲಿ ಪಾಲ್ಗೊಂಡರು, ಅಲ್ಲಿ ಅವರು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಲು ನಾಯಕರಿಗೆ ಸೂಚಿಸಿದರು.

ಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತವು ಎಲ್ಲಾ ನಿರೀಕ್ಷೆಗಳನ್ನು ಪೂರೈಸದಿದ್ದರೂ, ಫಲಿತಾಂಶಗಳು ತೃಪ್ತಿಕರವಾಗಿವೆ ಎಂದು ಅವರು ಒಪ್ಪಿಕೊಂಡರು. ಪಕ್ಷವು ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಹುದು ಎಂದು ಅವರು ಹೇಳಿದರು. ಶುಕ್ರವಾರ, ಸಂತೋಷ್ ಅವರು ರಾಜ್ಯಾದ್ಯಂತ ಬಿಜೆಪಿಯ ಸಾಮಾಜಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com