ಬಿಜೆಪಿ ಪರ ಗೂಢಚಾರಿಕೆ ಮಾಡುತ್ತಿದ್ದ ಮಾಂಝಿ ಮೈತ್ರಿ ಮುರಿದುಕೊಂಡಿದ್ದು ಒಳ್ಳೆಯದ್ದೇ ಆಯ್ತು: ನಿತೀಶ್ ಕುಮಾರ್ 

ಹಿಂದೂಸ್ಥಾನಿ ಅವಾಮ್ ಮೋರ್ಚಾ-ಸೆಕ್ಯುಲರ್ ಪಕ್ಷದ ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಜೆಡಿಯು ಜೊತೆ ಮೈತ್ರಿ ಮುರಿದುಕೊಂಡಿದ್ದು ಉತ್ತಮವೇ ಆಯಿತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. 
ಜಿತನ್ ರಾಮ್ ಮಾಂಝಿ- ನಿತೀಶ್ ಕುಮಾರ್
ಜಿತನ್ ರಾಮ್ ಮಾಂಝಿ- ನಿತೀಶ್ ಕುಮಾರ್

ಪಾಟ್ನ: ಹಿಂದೂಸ್ಥಾನಿ ಅವಾಮ್ ಮೋರ್ಚಾ-ಸೆಕ್ಯುಲರ್ ಪಕ್ಷದ ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಜೆಡಿಯು ಜೊತೆ ಮೈತ್ರಿ ಮುರಿದುಕೊಂಡಿದ್ದು ಉತ್ತಮವೇ ಆಯಿತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. 

ಮಾಂಝಿ ವಿರುದ್ಧ ಬಿಜೆಪಿ ಪರವಾಗಿ ಗೂಢಚಾರಿಕೆ ಮಾಡುತ್ತಿರುವ ಆರೋಪ ಮಾಡಿರುವ ನಿತೀಶ್ ಕುಮಾರ್, ಮಹಾಘಟಬಂಧನ ಮೈತ್ರಿಯಲ್ಲಿ ಏನೇಲ್ಲಾ ಆಗುತ್ತಿದೆ ಎಂಬುದನ್ನು ಬಿಜೆಪಿ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದರು ಎಂದು ಮಾಂಝಿ ಆರೋಪಿಸಿದ್ದಾರೆ.

ಮಾಜಿ ಸಿಎಂ ಮಾಂಝಿ ಅವರೇ 23 ವಿಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಆಸಕ್ತಿ ತೋರಿದ್ದರು. ಆದರೆ ನಮಗೆ ನಮ್ಮ ಮೈತ್ರಿಕೂಟದ ವಿವರಗಳನ್ನು ಆತ ಬಿಜೆಪಿಗೆ ಬಿಟ್ಟುಕೊಡುತ್ತಾರೆ ಎಂಬ ಬಗ್ಗೆ ಆತಂಕವಿತ್ತು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

"ಅವರು (ಮಾಂಝಿ) ಬಿಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅವರು ಇತ್ತೀಚೆಗೆ ಹಲವಾರು ಬಿಜೆಪಿ ನಾಯಕರನ್ನು ಭೇಟಿ ಮಾಡಿದರು. ಅವರು ಜೂನ್ 23 ರ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ಭಾಗವಹಿಸಲು ಬಯಸಿದ್ದರು... ಆದರೆ ಅವರು ಚರ್ಚಿಸಲಾಗುವ ವಿಷಯಗಳು ವಿಷಯಗಳನ್ನು ಅವರು ಸೋರಿಕೆ ಮಾಡಬಹುದು ಎಂಬ ಆತಂಕ ನನಗೆ ಇತ್ತು. ಎಂದು ನಿತೀಶ್ ಹೇಳಿದ್ದರೆ. 

ಈ ಆತಂಕದ ಹಿನ್ನೆಲೆಯಲ್ಲಿ ನಾನು ಅವರಿಗೆ ಹೆಎಎಂ-ಎಸ್ ನ್ನು ಜೆಡಿ ಯು ಜೊತೆ ವಿಲೀನಗೊಳಿಸುವಂತೆ ನಾನು ಕೇಳಿಕೊಂಡೆ. ಆದರೆ ಅವರು ನನ್ನ ಪ್ರಸ್ತಾವನೆಗೆ ನಿರಾಕರಿಸಿದರು. ಆದ್ದರಿಂದ ಮಹಾಮೈತ್ರಿಕೂಟವನ್ನು ತೊರೆಯುವಂತೆ ಮಾಂಝಿಗೆ ಹೇಳಿದ್ದೆ ಎಂದು ನಿತೀಶ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com