2000 ರೂಪಾಯಿ ಮುಖಬೆಲೆಯ 10 ಲಕ್ಷ ರೂ ಮೌಲ್ಯದ ನೋಟುಗಳೊಂದಿಗೆ ಸಿಕ್ಕಿಬಿದ್ದ ಮಾವೋವಾದಿ ಬೆಂಬಲಿಗ 

ಮಾವೋವಾದಿಗಳನ್ನು ಬೆಂಬಲಿಸುವ ಆರೋಪ ಹೊತ್ತಿದ್ದ ವ್ಯಕ್ತಿಯೋರ್ವ 2,000 ರೂಪಾಯಿ ಮುಖಬೆಲೆಯ 10 ಲಕ್ಷ ನೋಟುಗಳೊಂದಿಗೆ ಸಿಕ್ಕಿಬಿದ್ದಿರುವ ಘಟನೆ ಚತ್ತೀಸ್ ಗಢದ ಬಿಜಾಪುರ್ ನಲ್ಲಿ ನಡೆದಿದೆ. 
2000 ರೂಪಾಯಿ ನೋಟ್
2000 ರೂಪಾಯಿ ನೋಟ್

ಚತ್ತೀಸ್ ಗಢ: ಮಾವೋವಾದಿಗಳನ್ನು ಬೆಂಬಲಿಸುವ ಆರೋಪ ಹೊತ್ತಿದ್ದ ವ್ಯಕ್ತಿಯೋರ್ವ 2,000 ರೂಪಾಯಿ ಮುಖಬೆಲೆಯ 10 ಲಕ್ಷ ರೂಪಾಯಿ ಮೌಲ್ಯದ ನೋಟುಗಳೊಂದಿಗೆ ಸಿಕ್ಕಿಬಿದ್ದಿರುವ ಘಟನೆ ಚತ್ತೀಸ್ ಗಢದ ಬಿಜಾಪುರ್ ನಲ್ಲಿ ನಡೆದಿದೆ. 

ಈ ನೋಟುಗಳು ಮಾವೋವಾದಿ ಚಳುವಳಿಯ ನಾಯಕರಿಗೆ ಸಂಬಂಧಿಸಿದ್ದಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಆರ್ ಬಿಐ ಅವಕಾಶ ನೀಡಿದೆ. 

ಗಂಗಾಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಲ್ನಾರ್ ಗ್ರಾಮದ ನಿವಾಸಿ ದಿನೇಶ್ ತಾಟಿ (23) ಎಂಬಾತನನ್ನು  ಬಿಜಾಪುರ ಪಟ್ಟಣದ ಟ್ರ್ಯಾಕ್ಟರ್ ಶೋಮ್ ನಿಂದ ಬಂಧಿಸಲಾಯಿತು ಎಂದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಗವರ್ಣ ತಿಳಿಸಿದ್ದಾರೆ.

"ಆರಂಭದಲ್ಲಿ, ತಾಟಿ ತನ್ನನ್ನು ತಾನು ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಕಾರ್ಯಕರ್ತ ಎಂದು ಪರಿಚಯಿಸಿಕೊಂಡು ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ ಆದರೆ ನಂತರ ಗಂಗಾಲೂರ್ ಪ್ರದೇಶ ನಕ್ಸಲ್ ಸಮಿತಿಯ ನಾಲ್ವರು ಮುಖಂಡರಿಂದ 10 ಲಕ್ಷ ರೂಪಾಯಿ ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೇಳಿದರು.

ನಕ್ಸಲರು ಸಂಗ್ರಹಿಸಿದ್ದ 2000 ರೂಪಾಯಿ ನೋಟುಗಳನ್ನು ಟ್ರ್ಯಾಕ್ಟರ್ ಖರೀದಿಸುವ ಮೂಲಕ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು ಪ್ರಕರಣ ದಾಖಲಾಗಿಸಿ ಆತನಿಂದ ಬ್ಯಾಂಕ್ ಪಾಸ್ ಬುಕ್ ವಶಪಡಿಸಿಕೊಳ್ಳಲಾಗಿದೆ,'' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com