ಬಂಗಾಳದಲ್ಲಿ ಗ್ರಾಮಪಂಚಾಯತ್ ಚುನಾವಣೆಗೂ ಮುನ್ನ ಮುಂದುವರೆದ ಹಿಂಸಾಚಾರ, ಟಿಎಂಸಿ ಅಭ್ಯರ್ಥಿ ಸಾವು!

ಪಶ್ಚಿಮ ಬಂಗಾಳದಲ್ಲಿ ಗ್ರಾಮಪಂಚಾಯತ್ ಚುನಾವಣೆಗೂ ಮುನ್ನ ಹಿಂಸಾಚಾರ ತೀವ್ರಗೊಂಡಿದ್ದು, ಶನಿವಾರ ಟಿಎಂಸಿ ಅಭ್ಯರ್ಥಿಯ ಹತ್ಯೆ ನಡೆದಿದೆ. 
ಬಂಗಾಳದಲ್ಲಿ ಹಿಂಸಾಚರ
ಬಂಗಾಳದಲ್ಲಿ ಹಿಂಸಾಚರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಗ್ರಾಮಪಂಚಾಯತ್ ಚುನಾವಣೆಗೂ ಮುನ್ನ ಹಿಂಸಾಚಾರ ತೀವ್ರಗೊಂಡಿದ್ದು, ಶನಿವಾರ ಟಿಎಂಸಿ ಅಭ್ಯರ್ಥಿಯ ಹತ್ಯೆ ನಡೆದಿದೆ. 

ಮಾಲ್ಡಾದಲ್ಲಿ ಟಿಎಂಸಿ ಅಭ್ಯರ್ಥಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ನಡುವೆ, ಹಿಂಸಾಚಾರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಪಡೆಯ ಸಿಬ್ಬಂದಿಗಳನ್ನು ರಾಜ್ಯಾದ್ಯಂತ ನಿಯೋಜಿಸುವಂತೆ  ರಾಜ್ಯ ಚುನಾವಣಾ ಆಯೋಗಕ್ಕೆ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಆಯೋಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. 

ಚುನಾವಣಾ ಆಯೋಗ ಪಂಚಾಯತ್ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದ ನಂತರ ಜೂ.09 ರಿಂದ ಹಿಂಸಾಚಾರದಲ್ಲಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಜು.08 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 

ಹಿಂಸಾಚಾರ ಭುಗಿಲೆದ್ದಿರುವ  ಹಿನ್ನೆಲೆಯಲ್ಲಿ ಗೌರ್ನರ್ ಸಿವಿ ಆನಂದ ಬೋಸ್, ಹಿಂಸಾಚಾರ ನಡೆದಿರುವ ಪ್ರದೇಶಗಳಾದ ಭಂಗರ್, ಸೌತ್ 24 ಪರಗಣಾಸ್ ಗೆ ಭೇಟಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com