ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯದಲಿ ಶಾಂತಿಯ ಮರುಸ್ಥಾಪನೆಗಾಗಿ ಸಹಕರಿಸುವಂತೆ ಜನತೆ, ಆಡಳಿತಕ್ಕೆ ಕರೆ ನೀಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕೆಂದು ವಿಪಕ್ಷಗಳು ಹಾಗೂ ಮಣಿಪುರದ ಜನತೆಯ ಪೈಕಿ ಒಂದು ವರ್ಗ ಆಗ್ರಹಿಸುತ್ತಿರುವುದರ ನಡುವೆ ಆರ್ ಎಸ್ಎಸ್ ನ ಮನವಿ ಬಂದಿದೆ.
ಮಣಿಪುರದಲ್ಲಿ ಕಳೆದ 45 ದಿನಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಲಾಯ್ ಹರೋಬಾ ಹಬ್ಬದ ಸಂದರ್ಭದಲ್ಲಿ ಮೇ.03 ರಂದು ಚುರಚಂದ್ಪುರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ಉಂಟಾದ ಹಿಂಸಾಚಾರ ಹಾಗೂ ಅನಿಶ್ಚಿತತೆ ಖಂಡನೀಯವಾಗಿದೆ ಎಂದು ಆರ್ ಎಸ್ಎಸ್ ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಟ್ವಿಟರ್ ನಲ್ಲಿ ಮೂಲಕ ನೀಡಿದ್ದಾರೆ.
ಶತಮಾನಗಳಿಂದ ಪರಸ್ಪರ ಸೌಹಾರ್ದತೆ ಹಾಗೂ ಸಹಕಾರದಿಂದ ಬದುಕುತ್ತಿರುವವರ ನಡುವೆ ಅಶಾಂತಿ ಮತ್ತು ಹಿಂಸೆಯ ಅಲೆ ಎದ್ದಿರುವುದು, ಇನ್ನೂ ತಹಬದಿಗೆ ಬಾರದೇ ಇರುವುದು ದುರದೃಷ್ಟಕರ ಎಂದು ಆರ್ ಎಸ್ಎಸ್ ಹೇಳಿದೆ.
Advertisement