ಪತ್ನಿಯನ್ನು ಕೊಂದು, ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ಪಶು ವೈದ್ಯ ಆತ್ಮಹತ್ಯೆಗೆ ಶರಣು

ಮಹಾರಾಷ್ಟ್ರದ ಪುಣೆಯ ಹಳ್ಳಿಯೊಂದರಲ್ಲಿ 42 ವರ್ಷದ ಪಶು ವೈದ್ಯರೊಬ್ಬರು ತಮ್ಮ ಪತ್ನಿಯನ್ನು ಕೊಂದು, ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಮಹಾರಾಷ್ಟ್ರದ ಪುಣೆಯ ಹಳ್ಳಿಯೊಂದರಲ್ಲಿ 42 ವರ್ಷದ ಪಶು ವೈದ್ಯರೊಬ್ಬರು ತಮ್ಮ ಪತ್ನಿಯನ್ನು ಕೊಂದು, ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ದೌಂಡ್ ತಹಸಿಲ್‌ನ ವರ್ವಂಡ್ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದ್ದು, ಪಶು ವೈದ್ಯರನ್ನು ಡಾ.ಅತುಲ್ ದಿವೇಕರ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ದಿವೇಕರ್ ಮೊದಲು ತನ್ನ ಮನೆಯಲ್ಲಿ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಗ ಅದ್ವೈತ್ ಮತ್ತು ಮಗಳು ವೇದಾಂತಿ ಬಾವಿಗೆ ಎಸೆದಿದ್ದಾರೆ.

ನಂತರ ಮನೆಗೆ ಹಿಂತಿರುಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದಿವೇಕರ್ ಅವರ ಶವ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆಯಾಗಿದ್ದು, ಪರಿಶೀಲನೆ ವೇಳೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ.

ಅತುಲ್ ಬರೆದಿರುವ ಸೂಸೈಡ್ ನೋಟ್‌ನಲ್ಲಿ, ತನ್ನ ಪತ್ನಿಯ 'ಚಿತ್ರಹಿಂಸೆ'ಯೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ಪ್ರಕರಣವನ್ನು ಮತ್ತಷ್ಟು ಪರಿಶೀಲಿಸುತ್ತಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com