2009ರ ಶೋಪಿಯಾನ್ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ತಿರುಚಿ, ಪಾಕ್ ಪರ ಕೆಲಸ ಮಾಡಿದ್ದ ಇಬ್ಬರು ವೈದ್ಯರ ವಜಾ!

2009 ರಲ್ಲಿ ಶೋಪಿಯಾನ್ ನಲ್ಲಿ ನಡೆದ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ್ದ,  ಪಾಕ್ ಮೂಲದ ಸಂಘಟನೆಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವೈದ್ಯರನ್ನು ಜಮ್ಮು-ಕಾಶ್ಮೀರ ಆಡಳಿತ ಸೇವೆಯಿಂದ ವಜಾಗೊಳಿಸಿದೆ.
ವೈದ್ಯರು, ಸಂಗ್ರಹ ಚಿತ್ರ
ವೈದ್ಯರು, ಸಂಗ್ರಹ ಚಿತ್ರ
Updated on

ಶ್ರೀನಗರ: 2009 ರಲ್ಲಿ ಶೋಪಿಯಾನ್ ನಲ್ಲಿ ನಡೆದ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ್ದ,  ಪಾಕ್ ಮೂಲದ ಸಂಘಟನೆಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವೈದ್ಯರನ್ನು ಜಮ್ಮು-ಕಾಶ್ಮೀರ ಆಡಳಿತ ಸೇವೆಯಿಂದ ವಜಾಗೊಳಿಸಿದೆ.
 
2009 ರಲ್ಲಿ ಮೇ.30 ರಂದು ಆಸಿಯಾ ಜಾನ್ ಹಾಗೂ ನೀಲೋಫಾರ್ ಇಬ್ಬರ ಮೃತದೇಹ ತೊರೆಯೊಂದರಲ್ಲಿ ಪತ್ತೆಯಾಗಿತ್ತು. ಇಬ್ಬರನ್ನೂ ಭದ್ರತಾ ಪಡೆಗಳು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಘಟನೆಯ ಪರಿಣಾಮ 42 ದಿನಗಳು ಪ್ರತಿಭಟನೆಗಳು ನಡೆದಿದ್ದವು.  ಇದಾದ ಬಳಿಕ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡು ಆ ಇಬ್ಬರೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿಲ್ಲ, ಹತ್ಯೆಯೂ ಆಗಿಲ್ಲ ಎಂಬ ಅಂಶವನ್ನು ಪತ್ತೆ ಮಾಡಿತ್ತು. 

ಆದರೆ ಇಬ್ಬರು ವೈದ್ಯರಾದ ಡಾ. ಬಿಲಾಲ್ ಅಹ್ಮದ್ ದಲಾಲ್ ಹಾಗೂ ಡಾ. ನಿಘಾತ್ ಶಹೀನ್ ಚಿಲ್ಲೂ ಅವರು ಪಾಕಿಸ್ತಾನದೊಂದಿಗೆ ಸೇರಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಮೇ.29, 2009 ರಂದು ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದ ಆಸಿಯಾ ಜಾನ್ ಹಾಗೂ ನೀಲೋಫಾರ್ ಎಂಬ ಮಹಿಳೆಯರ ಮರಣೋತ್ತರ ವರದಿಯನ್ನು ತಪ್ಪಾಗಿ ನೀಡಿದ್ದರು ಅಷ್ಟೇ ಅಲ್ಲದೇ ಪಾಕ್ ಜೊತೆಗೆ ಸೇರಿ ಕಾಶ್ಮೀರದಲ್ಲಿ ಪಿತೂರಿ ನಡೆಸಿದ್ದರು ಇದಕ್ಕಾಗಿ ವೈದ್ಯರನ್ನು ವಜಾಗೊಳಿಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಅಧಿಕಾರಿಗಳು ಹೇಳಿದ್ದಾರೆ.

ಭದ್ರತಾ ಪಡೆಗಳ ವಿರುದ್ಧ ಸುಳ್ಳು ಅತ್ಯಾಚಾರ ಹಾಗೂ ಹತ್ಯೆ ಆರೋಪ ಹೊರಿಸುವ ಮೂಲಕ ಜಮ್ಮು-ಕಾಶ್ಮೀರದದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸುವುದು ವೈದ್ಯರ ಅಂತಿಮ ಉದ್ದೇಶವಾಗಿತ್ತು ಉದ್ದೇಶವಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com