ಜುಲೈ 11ರಂದು ನಡೆಯಲಿದ್ದ ಕುಸ್ತಿ ಫೆಡರೇಶನ್ ಚುನಾವಣೆಗೆ ತಡೆ ನೀಡಿದ ಗುವಾಹಟಿ ಹೈಕೋರ್ಟ್‌!

ಜುಲೈ 11ರಂದು ನಡೆಯಲಿದ್ದ ಕುಸ್ತಿ ಫೆಡರೇಶನ್ ಚುನಾವಣೆಗೆ ಗುವಾಹಟಿ ಹೈಕೋರ್ಟ್ ಇಂದು ತಡೆ ನೀಡಿದೆ. 
ಗುವಾಹಟಿ ಹೈಕೋರ್ಟ್
ಗುವಾಹಟಿ ಹೈಕೋರ್ಟ್

ಜುಲೈ 11ರಂದು ನಡೆಯಲಿದ್ದ ಕುಸ್ತಿ ಫೆಡರೇಶನ್ ಚುನಾವಣೆಗೆ ಗುವಾಹಟಿ ಹೈಕೋರ್ಟ್ ಇಂದು ತಡೆ ನೀಡಿದೆ. 

ಅಸ್ಸಾಂ ರೆಸ್ಲಿಂಗ್ ಫೆಡರೇಶನ್ ಡಬ್ಲ್ಯುಎಫ್‌ಐ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ತಾತ್ಕಾಲಿಕ ಸಮಿತಿ ಮತ್ತು ಕ್ರೀಡಾ ಸಚಿವಾಲಯದ ವಿರುದ್ಧ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಜುಲೈ 11ರಂದು ನಡೆಯಲಿರುವ ಡಬ್ಲ್ಯುಎಫ್‌ಐ ಚುನಾವಣೆಗೆ ತಡೆ ನೀಡಿದೆ.

ಅರ್ಜಿಯಲ್ಲಿ ಹೇಳಿದ್ದೇನು?
ಅಸ್ಸಾಂ ವ್ರೆಸ್ಲಿಂಗ್ ಫೆಡರೇಶನ್ ಡಬ್ಲ್ಯುಎಫ್‌ಐ ಸದಸ್ಯತ್ವ ಹೊಂದಲು ಅರ್ಹವಾಗಿದೆ. ಆದರೆ ಗೊಂಡಾ (ಉತ್ತರ ಪ್ರದೇಶ) ದಲ್ಲಿ ನವೆಂಬರ್ 15, 2014 ರಂದು ಡಬ್ಲ್ಯುಎಫ್‌ಐನ ಜನರಲ್ ಕೌನ್ಸಿಲ್‌ಗೆ ಆಗಿನ ಕಾರ್ಯಕಾರಿ ಸಮಿತಿಯು ಮಾಡಿದ ಶಿಫಾರಸಿನ ಹೊರತಾಗಿಯೂ ಅನುಮತಿ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಮಿತಿಯು ಮತದಾರರ ಪಟ್ಟಿಗೆ ಹೆಸರು ಕಳುಹಿಸಲು ಜೂನ್ 25 ಕೊನೆಯ ದಿನಾಂಕ ಎಂದು ನಿಗದಿಪಡಿಸಿದ್ದು, ಜುಲೈ 11ರಂದು ಹೊಸ ಆಡಳಿತ ಮಂಡಳಿಯ ಆಯ್ಕೆಗೆ ಚುನಾವಣೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಡಬ್ಲ್ಯುಎಫ್‌ಐಗೆ ಮಾನ್ಯತೆ ಸಿಗದವರೆಗೆ ಚುನಾವಣೆಗೆ ತಡೆ ನೀಡುವಂತೆ ಅರ್ಜಿದಾರರು ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com