ಕುಡಿದ ಅಮಲಿನಲ್ಲಿ ತಾಯಿಗೆ ಥಳಿತ: ಬರಿಗಾಲಲ್ಲಿ 3 ಕಿ.ಮೀ ನಡೆದು ಬಂದು ತಂದೆ ವಿರುದ್ಧ ದೂರು ನೀಡಿದ ಬಾಲಕ!

ಕುಡಿದ ಅಮಲಿನಲ್ಲಿ  ತಾಯಿಯ ಮೇಲೆ ತಂದೆ ನಡೆಸುತ್ತಿದ್ದ ಹಲ್ಲೆ ನಿಲ್ಲಿಸಲು 12 ವರ್ಷದ ಬಾಲಕನೊಬ್ಬ ಸುಮಾರು 3 ಕಿಮೀ ಬರಿಗಾಲಲ್ಲಿ ಪೊಲೀಸ್ ಠಾಣೆಗೆ ನಡೆದುಕೊಂಡೇ ಬಂದಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಗ್ರಾ: ಕುಡಿದ ಅಮಲಿನಲ್ಲಿ  ತಾಯಿಯ ಮೇಲೆ ತಂದೆ ನಡೆಸುತ್ತಿದ್ದ ಹಲ್ಲೆ ನಿಲ್ಲಿಸಲು 12 ವರ್ಷದ ಬಾಲಕನೊಬ್ಬ ಸುಮಾರು 3 ಕಿಮೀ ಬರಿಗಾಲಲ್ಲಿ ಪೊಲೀಸ್ ಠಾಣೆಗೆ ನಡೆದುಕೊಂಡೇ ಬಂದಿದ್ದಾನೆ.

ಆಗ್ರಾದ ಬಹ್ ಬ್ಲಾಕ್‌ನ ಜೆಬ್ರಾ ಗ್ರಾಮದಲ್ಲಿ 40 ವರ್ಷದ ಹರಿಯೋಮ್ ತನ್ನ ತಾಯಿಗೆ ಬೆಲ್ಟ್ ಮತ್ತು ಕಬ್ಬಿಣದ ಪೈಪ್ ನಿಂದ ಹೊಡೆಯುವುದನ್ನುನೋಡಿದ್ದಾನೆ, ತನ್ನ ತಾಯಿಯನ್ನು ರಕ್ಷಿಸಿಕೊಳ್ಳಲು ಪೊಲೀಸ್ ಠಾಣೆಗೆ ತೆರಳಿದ್ದಾನೆ.

ಮಂಗಳವಾರ ಬೆಳಗ್ಗೆ ನಾನು ನನ್ನ ಕಚೇರಿಯ ಹೊರಗೆ ಕುಳಿತಿದ್ದಾಗ ಬಾಲಕ ಪೊಲೀಸ್ ಠಾಣೆಗೆ ಬಂದನು, ಅವನು ನನ್ನ ಕಡೆಗೆ ಧಾವಿಸಿ ತನ್ನ ತಂದೆ ಹರಿಯೋಮ್ ತನ್ನ ತಾಯಿಗೆ  ಬೆಲ್ಟ್ ಮತ್ತು ಕಬ್ಬಿಣದ ಪೈಪ್‌ನಿಂದ ಹೊಡೆಯುತ್ತಿದ್ದಾನೆ ಎಂದು ದೂರಿದ ಎಂದು ಬಸೋನಿ ಪೊಲೀಸ್ ಠಾಣೆ ಪ್ರಭಾರಿ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.

12 ವರ್ಷದ ಬಾಲಕನ ತಂದೆ ಮದ್ಯವ್ಯಸನಿಯಾಗಿದ್ದು, ಪತ್ನಿಗೆ ನಿತ್ಯ ಥಳಿಸುತ್ತಿದ್ದ, ಆಗ್ರಾ ಗ್ರಾಮಾಂತರದ ಬಹ್‌ನಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ ಎಂದು ಕುಮಾರ್ ಹೇಳಿದರು.

ಠಾಣಾಧಿಕಾರಿ ಕೂಡಲೇ ಪೊಲೀಸರ ತಂಡವನ್ನು ಬಾಲಕನ ಮನೆಗೆ ಕಳುಹಿಸಿದರು.   ಆರಂಭದಲ್ಲಿ ಹರಿಯೋಮ್ ನನ್ನು ಪೊಲೀಸರು ಬಂಧಿಸಿದರು.

ಆದರೆ ನಂತರ ಅವನ ಹೆಂಡತಿ ಆರೋಪಗಳನ್ನು ಮಾಡಲು ಬಯಸದ ಕಾರಣ ಆತನನು ಬಿಟ್ಟುಬಿಟ್ಟರು ಇನ್ನು ಮುಂದೆ ಹಲ್ಲೆ ಮಾಡುವುದಿಲ್ಲ ಎಂದು ಹರಿಯೋಮ್ ಪ್ರತಿಜ್ಞೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕನ ಧೈರ್ಯವನ್ನು ಪೊಲೀಸರು ಮತ್ತು ಗ್ರಾಮಸ್ಥರು ಶ್ಲಾಘಿಸಿದ್ದಾರೆ , ಚಿಕ್ಕ ಹುಡುಗನ ಧೈರ್ಯವನ್ನು ನೋಡಿ ನನಗೆ ಆಶ್ಚರ್ಯವಾಯಿತು ಮತ್ತು ಸಂತೋಷವಾಯಿತು. ಅವನ ವಯಸ್ಸಿನ ಮಕ್ಕಳು ಪೊಲೀಸ್ ಠಾಣೆಗೆ ಧಾವಿಸಿ ಇಂತಹ ಘಟನೆಗಳ ಬಗ್ಗೆ ದೂರು ನೀಡುವುದು ಅಪರೂಪ, ಆದರೆ ಬಾಲಕ ಒಬ್ಬನೇ ಬಂದು ಇಡೀ ಘಟನೆಯ ಬಗ್ಗೆ ನಮಗೆ ತಿಳಿಸಿದ ಎಂದು ಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com