ಮಣಿಪುರ: ಬೆಂಗಾವಲು ಪಡೆಗೆ ತಡೆ; ಹೆಲಿಕಾಪ್ಟರ್ ನಲ್ಲಿ ನಿರಾಶ್ರಿತರ ಶಿಬಿರಕ್ಕೆ ತೆರಳಿದ ರಾಹುಲ್

ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದ ಕಾರಣಗಳ ಗಂಟೆಗಳ ಕಾಲ ಬಿಷ್ಟುಪುರದಲ್ಲಿ ಸಿಲುಕಿದ ನಂತರ ರಾಹುಲ್ ಗಾಂಧಿ, ಹೆಲಿಕಾಪ್ಟರ್ ನಲ್ಲಿ ಚುರಾಚಂದ್‌ಪುರದ ನಿರಾಶ್ರಿತರ ಶಿಬಿರಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಭೇಟಿ ವಿರೋಧಿಸಿ ಬೆಂಗಾವಲು ಪಡೆ ತಡೆದ ಪೊಲೀಸರು
ರಾಹುಲ್ ಭೇಟಿ ವಿರೋಧಿಸಿ ಬೆಂಗಾವಲು ಪಡೆ ತಡೆದ ಪೊಲೀಸರು

ಇಂಫಾಲ್: ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದ ಕಾರಣಗಳ ಗಂಟೆಗಳ ಕಾಲ ಬಿಷ್ಟುಪುರದಲ್ಲಿ ಸಿಲುಕಿದ ನಂತರ ರಾಹುಲ್ ಗಾಂಧಿ, ಹೆಲಿಕಾಪ್ಟರ್ ನಲ್ಲಿ ಚುರಾಚಂದ್‌ಪುರದ ನಿರಾಶ್ರಿತರ ಶಿಬಿರಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ. ಬೆಂಗಾವಲು ಪಡೆ ವಾಹನದ ಮೇಲೆ ದಾಳಿ ಭೀತಿಯಿಂದ ಇಂಫಾಲ್ ನಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಬಿಷ್ಣುಪುರದಲ್ಲಿ ರಾಹುಲ್ ಗಾಂಧಿಯನ್ನು ಪೊಲೀಸರು ತಡೆದರು. 

ತದನಂತರ ರಾಜ್ಯಸರ್ಕಾರದ ಹೆಲಿಕಾಪ್ಟರ್ ನಲ್ಲಿ ಚುರಚಂದಪುರಕ್ಕೆ ರಾಹುಲ್ ಗಾಂಧಿ ತೆರಳಿದ್ದಾರೆ. ಅವರೊಂದಿಗೆ ಪೊಲೀಸ್ ಮತ್ತು ಆಡಳಿತದ ಉನ್ನತಾಧಿಕಾರಿಗಳು ಕೂಡಾ ಹೆಲಿಕಾಪ್ಟರ್ ನಲ್ಲಿದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಜನಾಂಗೀಯ ಕಲಹ ಪೀಡಿತ ಈಶಾನ್ಯ ರಾಜ್ಯಕ್ಕೆ ಎರಡು ದಿನ ಭೇಟಿ ಕೈಗೊಂಡಿಕುವ ಕಾಂಗ್ರೆಸ್ ನಾಯಕ, ಬಿಷ್ಣುಪುರದಿಂದ ಇಂಫಾಲ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ಹೆಲಿಕಾಪ್ಟರ್ ಹತ್ತಿದರು ಎಂದು ಮೂಲಗಳು ತಿಳಿಸಿವೆ.

ಕೆಲವರು ರಾಹುಲ್ ಗಾಂಧಿ ಚುರಚಂದಪುರಕ್ಕೆ ತೆರಳಬೇಕು ಎಂದು ಬಯಸಿದರೆ ಮತ್ತೆ ಕೆಲವರು ಅವರ ಭೇಟಿಯನ್ನು ವಿರೋಧಿಸಿದರು. ಇದರಿಂದಾಗಿ  ಬಿಷ್ಣುಪುರದಲ್ಲಿ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com