ಮುಂದಿನ 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆ: ಕೇಂದ್ರ ಸರ್ಕಾರ

ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಹೆಚ್ಚಳದೊಂದಿಗೆ ಮುಂದಿನ 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಮತ್ತು ಒಂದು ತಿಂಗಳಲ್ಲಿ ಬೆಲೆ ಸಾಮಾನ್ಯ ಮಟ್ಟಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಉನ್ನತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಉತ್ಪಾದನಾ ಕೇಂದ್ರಗಳಿಂದ ಪೂರೈಕೆ ಹೆಚ್ಚಳದೊಂದಿಗೆ ಮುಂದಿನ 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಮತ್ತು ಒಂದು ತಿಂಗಳಲ್ಲಿ ಬೆಲೆ ಸಾಮಾನ್ಯ ಮಟ್ಟಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಿಂದ ಟೊಮೆಟೊ ಸರಬರಾಜು ಹೆಚ್ಚುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಟೊಮೆಟೊ ಚಿಲ್ಲರೆ ಬೆಲೆ ತಕ್ಷಣವೇ ಕಡಿಮೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಪ್ರತಿ ವರ್ಷ ಈ ಸಮಯದಲ್ಲಿ ಟೊಮೆಟೋ ಬೆಲೆ ಏರಿಕೆಯ ವಿದ್ಯಮಾನಗಳು ನಡೆಯುತ್ತವೆ. ಜೂನ್‌ನಲ್ಲಿ ತರಕಾರಿ ಬೆಲೆಗಳು ಹೆಚ್ಚಿನ ಮಟ್ಟವನ್ನು ತಲುಪಿದವು" ಎಂದು ಅವರು ಹೇಳಿದ್ದಾರೆ.

"ನೀವು ದೀರ್ಘಕಾಲದವರೆಗೆ ಟೊಮೆಟೊವನ್ನು ಸಂಗ್ರಹಿಸಲು ಆಗುವುದಿಲ್ಲ ಮತ್ತು ಅದನ್ನು ದೂರದವರೆಗೆ ಸಾಗಿಸಲು ಸಹ ಸಾಧ್ಯವಿಲ್ಲ. ಸರಕುಗಳಲ್ಲಿ ಅಂತರ್ಗತ ದುರ್ಬಲತೆ ಇದೆ. ಸಾರಿಗೆ ಕೂಡ ದೊಡ್ಡ ಸಮಸ್ಯೆಯಾಗಿದೆ" ಎಂದು ಅವರು ತಿಳಿಸಿದ್ದಾರೆ.

ಜೂನ್-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಸಹ ಕಡಿಮೆ ಉತ್ಪಾದನಾ ಋತುಗಳಾಗಿದ್ದು, ಈ ಅವಧಿಯಲ್ಲಿ ಸಾಮಾನ್ಯವಾಗಿ ಬೆಲೆ ತೀವ್ರ ಏರಿಕೆಯಾಗುವುದು ಸಹಜ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com