2021-22ರಲ್ಲಿ ಅದಾನಿ ಪವರ್‌ನಿಂದ 8,160 ಕೋಟಿ ರೂ. ವಿದ್ಯುತ್ ಖರೀದಿ: ಗುಜರಾತ್ ಸರ್ಕಾರ

2021 - 2022ನೇ ಸಾಲಿನಲ್ಲಿ ಅದಾನಿ ಪವರ್ ಲಿಮಿಟೆಡ್‌ನಿಂದ 8,160 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಖರೀದಿಸಲಾಗಿದ್ದು, ಪ್ರತಿ ಯೂನಿಟ್‌ಗೆ 2.83 ರೂ. ನಿಂದ 8.83 ರೂ.ಗೆ  ಪರಿಷ್ಕರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ ತಿಳಿಸಿದೆ.
ಗೌತಮ್ ಅದಾನಿ
ಗೌತಮ್ ಅದಾನಿ

ಗಾಂಧಿನಗರ: 2021 - 2022ನೇ ಸಾಲಿನಲ್ಲಿ ಅದಾನಿ ಪವರ್ ಲಿಮಿಟೆಡ್‌ನಿಂದ 8,160 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಖರೀದಿಸಲಾಗಿದ್ದು, ಪ್ರತಿ ಯೂನಿಟ್‌ಗೆ 2.83 ರೂ. ನಿಂದ 8.83 ರೂ.ಗೆ  ಪರಿಷ್ಕರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ ತಿಳಿಸಿದೆ.

ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕ ಹೇಮಂತ್ ಅಹಿರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಇಂಧನ ಸಚಿವ ಕನು ದೇಸಾಯಿ, 2021-22 ರಲ್ಲಿ ಸರ್ಕಾರ, ಅದಾನಿ ಕಂಪನಿಯಿಂದ 8,160 ಕೋಟಿ ರೂಪಾಯಿಗೆ 11,596 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಸಿದೆ ಎಂದು ಹೇಳಿದರು.

ಪ್ರತಿ ಯೂನಿಟ್‌ಗೆ 2.83-ರೂ. ನಿಂದ 8.83 ರೂಪಾಯಿ ನೀಡಲಾಗಿದ್ದು, ವಿದ್ಯುತ್ ಶುಲ್ಕವನ್ನು ತಿಂಗಳಿನಿಂದ ತಿಂಗಳಿಗೆ  ಪರಿಷ್ಕರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

2007 ರಲ್ಲಿ, ರಾಜ್ಯ ಸರ್ಕಾರ ಅದಾನಿ ಪವರ್ ಲಿಮಿಟೆಡ್‌ನಿಂದ 25 ವರ್ಷಗಳ ಕಾಲ ವಿದ್ಯುತ್ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ದೇಸಾಯಿ ತಿಳಿಸಿದ್ದಾರೆ.

ಕಲ್ಲಿದ್ದಲಿನ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ರಾಜ್ಯ ಸರ್ಕಾರವು ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿ ಒಪ್ಪಂದದಡಿಯಲ್ಲಿ ಪ್ರತಿ ಯೂನಿಟ್ ದರಗಳನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com