ರಾಜಸ್ಥಾನ ಸಿಎಂ ಗೆಹ್ಲೋಟ್ ವಿರುದ್ಧ ಕೇಂದ್ರ ಸಚಿವರಿಂದ ಮಾನನಷ್ಟ ಮೊಕದ್ದಮೆ

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್
Updated on

ನವದೆಹಲಿ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ವಿರುದ್ಧ ದಾರಿ ತಪ್ಪಿಸುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.ರಾಜಸ್ಥಾನದ ಜೋಧ್ ಪುರ ಲೋಕಸಭಾ ಸಂಸದರಾಗಿರುವ ಶೇಖಾವತ್, ತಮ್ಮ ವಿರುದ್ಧ ಮಾನನಷ್ಟಕಾರಿ ಹೇಳಿಕೆ ನೀಡಿರುವುದಕ್ಕಾಗಿ ರಾಜಸ್ಥಾನ ಸಿಎಂ ಗೆಹ್ಲೋಟ್ ಅವರಿಂದ ಆರ್ಥಿಕ ಪರಿಹಾರವನ್ನು ಕೋರಿದ್ದಾರೆ.
 
ಫೆಬ್ರವರಿ ತಿಂಗಳಲ್ಲಿ ಗೆಹ್ಲೋಟ್, ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಸಂಜೀವಿನಿ ಸಹಕಾರಿ ಸೊಸೈಟಿ ಹಗರಣದಲ್ಲಿ ವಿಶೇಷ ಕಾರ್ಯಪಡೆ ಗುಂಪಿನಿಂದ (ಎಸ್ಒಜಿ)ಯಿಂದ ಕೇಂದ್ರ ಸಚಿವರ ವಿರುದ್ಧದ ಅಪರಾಧ ಸಾಬೀತಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com