ಜಮ್ಮು-ಕಾಶ್ಮೀರ: ರಸ್ತೆ ನಿರ್ಮಾಣದ ವೇಳೆ 6 ಗ್ರೆನೇಡ್, ಮದ್ದುಗುಂಡುಗಳು ಪತ್ತೆ

ಜಮ್ಮು-ಕಾಶ್ಮೀರದ ರಜೌರಿಯಲ್ಲಿ ರಸ್ತೆ ನಿರ್ಮಾಣದ ವೇಳೆ 6 ಹ್ಯಾಂಡ್ ಗ್ರೆನೇಡ್ ಗಳನ್ನು ವಶಕ್ಕೆ ಪಡೆದಿದ್ದು 127 ರೌಂಡ್ ಗಳ ಸಾಮಾನ್ಯ ಬಳಕೆಯ ಮಷಿನ್ ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಮ್ಮು-ಕಾಶ್ಮೀರ ಪೊಲೀಸರು (ಸಂಗ್ರಹ ಚಿತ್ರ)
ಜಮ್ಮು-ಕಾಶ್ಮೀರ ಪೊಲೀಸರು (ಸಂಗ್ರಹ ಚಿತ್ರ)

ಶ್ರೀನಗರ: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ರಸ್ತೆ ನಿರ್ಮಾಣದ ವೇಳೆ 6 ಹ್ಯಾಂಡ್ ಗ್ರೆನೇಡ್ ಗಳನ್ನು ವಶಕ್ಕೆ ಪಡೆದಿದ್ದು 127 ರೌಂಡ್ ಗಳ ಸಾಮಾನ್ಯ ಬಳಕೆಯ ಮಷಿನ್ ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
 
ಗ್ರೆನೇಡ್ ಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಮಣ್ಣಲ್ಲಿ ಹೂಳಲಾಗಿತ್ತು. ಮಂಜಕೋಟೆ ತಹಸಿಲ್ ನೈಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ಶಸ್ತ್ರಾಸ್ತ್ರಗಳನ್ನು ಕಾರ್ಮಿಕರು ಪತ್ತೆ ಮಾಡಿದ್ದಾರೆ.

ಉಪವಿಭಾಗೀಯ ಪೊಲೀಸ್ ಅಧಿಕಾರಿ ಝಾಫರ್ ಈ ಬಗ್ಗೆ ಮಾತನಾಡಿದ್ದು, ಗ್ರೆನೇಡ್ ಗಳು ತುಕ್ಕು ಹಿಡಿದ ಸ್ಥಿತಿಯಲ್ಲಿವೆ ಬಹುಶಃ ಇದು ಬಹಳ ಹಿಂದೆ ಇಡಲಾಗಿತ್ತು ಎಂದು ಹೇಳಿದ್ದಾರೆ.

ತಕ್ಷಣವೇ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com