ಮಧ್ಯಪ್ರದೇಶ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕರು, ಪಾದ್ರಿ, ನನ್ ವಿರುದ್ಧ ಪ್ರಕರಣ ದಾಖಲು

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪಾದ್ರಿ, ಶಿಕ್ಷಕರು, ನನ್ ವಿರುದ್ಧ ಮಧ್ಯಪ್ರದೇಶದ ದಿಂಡೋರಿಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ಕಿರುಕುಳ (ಸಾಂಕೇತಿಕ ಚಿತ್ರ)
ಲೈಂಗಿಕ ಕಿರುಕುಳ (ಸಾಂಕೇತಿಕ ಚಿತ್ರ)

ಭೋಪಾಲ್: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪಾದ್ರಿ, ಶಿಕ್ಷಕರು, ನನ್ ವಿರುದ್ಧ ಮಧ್ಯಪ್ರದೇಶದ ದಿಂಡೋರಿಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಯರಿಗೆ ಥಳಿಸುವುದು ಹಾಗೂ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪಾದ್ರಿ, ಶಿಕ್ಷಕರು, ನನ್ ವಿರುದ್ಧ ಕೇಳಿಬಂದಿದೆ.
 
40 ವರ್ಷದ ಪ್ರಾಂಶುಪಾಲರು ಹಾಗೂ 35 ವರ್ಷದ ಅತಿಥಿ ಶಿಕ್ಷಕರ ವಿರುದ್ಧ ಸೆಕ್ಷನ್ 354 (ಆಕೆಯ ನಮ್ರತೆಯನ್ನು ಕೆರಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಆಕ್ರಮಣ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೋಕ್ಸೋ ಕಾಯ್ದೆ ಹಾಗೂ ಬಾಲಾಪರಾಧಿ ನ್ಯಾಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಡಿಂಡೋರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.  

ಶಾಲೆಯ ಉಸ್ತುವಾರಿಯಾಗಿರುವ 40 ವರ್ಷದ ಪಾದ್ರಿಯ ವಿರುದ್ಧವೂ ವಿದ್ಯಾರ್ಥಿನಿಯರು ದೂರು ನೀಡಿದ್ದು, ನನ್ ವಿರುದ್ಧ ವಿದ್ಯಾರ್ಥಿನಿಯರನ್ನು ಥಳಿಸುತ್ತಿದ್ದ ಆರೋಪ ಕೇಳಿಬಂದಿದೆ. ಈ ವರೆಗಿನ ಮಾಹಿತಿಯ ಪ್ರಕಾರ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

ಜಬಲ್ಪುರ್ ನಲ್ಲಿರುವ ರೋಮನ್ ಕ್ಯಾಥೋಲಿಕ್ ಸಮುದಾಯದ ಡಯೋಸಿಸನ್ ಎಜುಕೇಶನ್ ಸೊಸೈಟಿ ಈ ಶಾಲೆಯನ್ನು ನಡೆಸುತ್ತಿತ್ತು. ಮಧ್ಯಪ್ರದೇಶದ ಮಕ್ಕಳ ರಕ್ಷಣಾ ಇಲಾಖೆ ಸದಸ್ಯರು ಹಾಗೂ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ ಪಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com