ಆರ್ ಎಸ್ ಎಸ್ ಸೇರಲು ಡಿಜಿಟಲ್ ಪ್ಲಾಟ್‌ ಫಾರ್ಮ್‌ ಮೂಲಕ ಯುವ ಜನರ ಆಸಕ್ತಿ: 7 ಲಕ್ಷಕ್ಕೂ ಹೆಚ್ಚು ಮನವಿ ಸ್ವೀಕಾರ

ಪ್ರತಿಪಕ್ಷಗಳ ಎಲ್ಲಾ ಟೀಕೆಗಳ ನಡುವೆ, ಕಳೆದ 5 ವರ್ಷಗಳಿಂದ ವಿಶೇಷವಾಗಿ ಯುವಜನರಲ್ಲಿ ಆರ್‌ಎಸ್‌ಎಸ್ ಸೇರುವ ಕ್ರೇಜ್ ಹೆಚ್ಚಾಗಿದೆ. ಆರ್‌ಎಸ್‌ಎಸ್  ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದೆ
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ: ಪ್ರತಿಪಕ್ಷಗಳ ಎಲ್ಲಾ ಟೀಕೆಗಳ ನಡುವೆ, ಕಳೆದ 5 ವರ್ಷಗಳಿಂದ ವಿಶೇಷವಾಗಿ ಯುವಜನರಲ್ಲಿ ಆರ್‌ಎಸ್‌ಎಸ್ ಸೇರುವ ಕ್ರೇಜ್ ಹೆಚ್ಚಾಗಿದೆ. ಆರ್‌ಎಸ್‌ಎಸ್  ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದೆ.ಡಿಜಿಟಲ್ ತಿಳುವಳಿಕೆಯುಳ್ಳ ಯುವಕರು, ರಾಷ್ಟ್ರ ಮತ್ತು ಸಮಾಜದ ಕಡೆಗೆ ಸಂಘದ ಸಿದ್ಧಾಂತಗಳಿಂದ ಪ್ರೇರಿತರಾದ ನಂತರ ಸಂಘದೊಂದಿಗೆ ತಮ್ಮ ಒಡನಾಟವನ್ನು ಹೊಂದಲು ಡಿಜಿಟಲ್ ವೇದಿಕೆಗಳ ಮೂಲಕ ಸಂಪರ್ಕಿಸುತ್ತಿದ್ದಾರೆ.

ಆರ್ ಎಸ್ ಎಸ್ ತನ್ನ ಸಾಮಾಜಿಕ ಜಾಗೃತಿ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸಿಕೆ ಹೆಚ್ಚಿಸುವ ಮೂಲಕ  ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷ ಸ್ಥಳ ತಲುಪುವ ಸಂಕಲ್ಪದ ಸಮಯದಲ್ಲಿಯೇ ಇದು ನಡೆಯುತ್ತಿದೆ. 71, 355 ಸ್ಥಳಗಳಲ್ಲಿ ನೇರವಾಗಿ ಕೆಲಸ ಮಾಡುವ ಮೂಲಕ ಸಮಾಜ ಪರಿವರ್ತನೆಯ ಮಹತ್ವದ ಕಾರ್ಯದಲ್ಲಿ ಸಂಘವು ತನ್ನ ಪಾತ್ರವನ್ನು ನಿರ್ವಹಿಸುತ್ತಿರುವ ಸಮಯದಲ್ಲಿ, ಸಂಘದ ಬಗ್ಗೆ ಜನರ ಆಸಕ್ತಿಯೂ ಹೆಚ್ಚಿದೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಸಂಘವನ್ನು ಸಂಪರ್ಕಿಸುತ್ತಿದ್ದಾರೆ ಎಂದು ಆರ್ ಎಸ್ ಎಸ್ ಹಿರಿಯ ಪದಾಧಿಕಾರಿ ಡಾ. ಮನ್ ಮೋಹನ್ ವೈದ್ಯ ಭಾನುವಾರ ಹೇಳಿದರು. 

ಸಂಘದ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿದ್ದು, ಸಂಘವನ್ನು ಹುಡುಕುತ್ತಿದ್ದಾರೆ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸಂಘದೊಂದಿಗೆ ಸಂಪರ್ಕ ಸಾಧಿಸಲು ವಿನಂತಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 2017 ಮತ್ತು 2022 ರ ನಡುವೆ ಸಂಘವು ಆರ್‌ಎಸ್‌ಎಸ್‌ಗೆ ಸೇರಲು 7, 25,000 ಮನವಿಗಳನ್ನು ಜನರಿಂದ ಸ್ವೀಕರಿಸಿದೆ ಎಂದು ಅವರು ಹೇಳಿದ್ದಾರೆ. ಆರ್ ಎಸ್ಎಸ್ ಸೇರಲು ಹೆಚ್ಚಿನ ಆಸಕ್ತಿ ತೋರಿರುವವರಲ್ಲಿ  20 ಮತ್ತು 35 ವರ್ಷ ವಯಸ್ಸಿನ ಯುವಕರೇ ಹೆಚ್ಚಾಗಿದ್ದಾರೆ. ಅವರು ಸಾಮಾಜಿಕ ಸೇವೆಗಳಿಗಾಗಿ ಸಂಘವನ್ನು ಸೇರಲು ಬಯಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com