ಈ ಬಾರಿ ಮೂರು ಪಾಳಿಯಲ್ಲಿ ಸಿಯುಇಟಿ: ಯುಜಿಸಿ ಮುಖ್ಯಸ್ಥ ಜಗದೇಶ್ ಕುಮಾರ್

ವಿಶ್ವವಿದ್ಯಾಲಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಯುಜಿ)ಯನ್ನು ಈ ವರ್ಷ ಎರಡರ ಬದಲಾಗಿ ಮೂರು ಪಾಳಿಗಳಲ್ಲಿ ನಡೆಸಲಾಗುವುದು ಮತ್ತು ಜೆಇಇ ಹಾಗೂ ನೀಟ್‌ನಂತಹ ನಿರ್ಣಾಯಕ ಪ್ರವೇಶ...
ಜಗದೇಶ್ ಕುಮಾರ್
ಜಗದೇಶ್ ಕುಮಾರ್

ನವದೆಹಲಿ: ವಿಶ್ವವಿದ್ಯಾಲಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಯುಜಿ)ಯನ್ನು ಈ ವರ್ಷ ಎರಡರ ಬದಲಾಗಿ ಮೂರು ಪಾಳಿಗಳಲ್ಲಿ ನಡೆಸಲಾಗುವುದು ಮತ್ತು ಜೆಇಇ ಹಾಗೂ ನೀಟ್‌ನಂತಹ ನಿರ್ಣಾಯಕ ಪ್ರವೇಶ ಪರೀಕ್ಷೆಗಳೊಂದಿಗೆ ಅದನ್ನು ವಿಲೀನ ಮಾಡುವ ಬಗ್ಗೆ ಕನಿಷ್ಠ ಎರಡು ವರ್ಷಗಳ ಮುಂಚಿತವಾಗಿಯೇ ಪ್ರಕಟಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಅವರು ಬುಧವಾರ ತಿಳಿಸಿದ್ದಾರೆ.

ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್(ಯುಜಿಸಿ) ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಸಿಯುಇಟಿ-ಯುಜಿಯ ಎರಡನೇ ಆವೃತ್ತಿಯನ್ನು ದೋಷ ಮುಕ್ತವಾಗಿ ನಡೆಸಲು ಸಿದ್ಧವಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಜಗದೀಶ್ ಕುಮಾರ್ ಅವರು ಹೇಳಿದ್ದಾರೆ.

"ಕಳೆದ ವರ್ಷ ವಿದ್ಯಾರ್ಥಿಗಳ ಅನುಭವಕ್ಕೆ ಬಂದಿರುವಂತೆ ಸಿಯುಇಟಿ ಪರೀಕ್ಷೆಯಲ್ಲಿ ಹಲವು ದೋಷಗಳು ಇದ್ದವು ಎಂದು ನಾನು ಒಪ್ಪುತ್ತೇನೆ. ಆದರೆ ಈ ವರ್ಷ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಎಚ್ಚರ ವಹಿಸಲಾಗುವುದು ಎಂದು ಯುಜಿಸಿ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಬಾರಿ ಹೆಚ್ಚುವರಿ ಕಂಪ್ಯೂಟರ್‌ಗಳು ಮತ್ತು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಒಳಗೊಂಡ ‘ಪ್ಲಾನ್‌ ಬಿ’ ಅನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಲೋಪ– ದೋಷಗಳು ಎದುರಾದಲ್ಲಿ ಅಭ್ಯರ್ಥಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಈ ಮೂಲಕ ನಿರ್ದಿಷ್ಟ ಪರೀಕ್ಷೆ ರದ್ದಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com