ಚರ್ಚ್ ಆಫ್ ನಾರ್ತ್ ಇಂಡಿಯಾದ ನಾಗ್ಪುರ ಸೇರಿದಂತೆ 11 ಕಚೇರಿ ಮೇಲೆ ಇಡಿ ದಾಳಿ!

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚರ್ಚ್ ಆಫ್ ನಾಗ್ಪುರ ಸೇರಿದಂತೆ ಅದರ 11 ಕಚೇರಿ (ಸಿಎನ್ಐ) ಮೇಲೆ ದಾಳಿ ನಡೆಸಿದ್ದಾರೆ.
ಸಿಎನ್ಐ ನ ಬಿಷಪ್ ಪಿಸಿ ಸಿಂಗ್
ಸಿಎನ್ಐ ನ ಬಿಷಪ್ ಪಿಸಿ ಸಿಂಗ್
Updated on

ನಾಗ್ಪುರ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚರ್ಚ್ ಆಫ್ ನಾಗ್ಪುರ ಸೇರಿದಂತೆ ಅದರ 11 ಕಚೇರಿ (ಸಿಎನ್ಐ) ಮೇಲೆ ದಾಳಿ ನಡೆಸಿದ್ದಾರೆ. ಭೋಪಾಲ್ ನಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದೆ.
 
ಜಬಲ್ಪುರ ಪ್ರಾಂತ್ಯದ ಸಿಎನ್ಐ ನ ಬಿಷಪ್ ಪಿಸಿ ಸಿಂಗ್ ವಿರುದ್ಧ ವಂಚನೆಯ ಪ್ರಕರಣದ ಭಾಗವಾಗಿ ಈ ದಾಳಿಯಾಗಿದ್ದು, ಸದರ್ ಪ್ರದೇಶದ ಪ್ರೊಟೆಸ್ಟಂಟ್ ಪಂಗಡದ ಸಿಎನ್ಐ ಕಚೇರಿಯಲ್ಲಿ ಅಧಿಕಾರಿಗಳು ಶೋಧಕಾರ್ಯಾಚರಣೆ ಕೈಗೊಂಡಿದ್ದಾರೆ. ಸಿಂಗ್ ಅವರನ್ನು ಸೆಪ್ಟೆಂಬರ್ 2022 ರಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸಿ ಸಿಂಗ್ ಅವರ ನಿವಾಸದಿಂದ 1.6 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಹಾಗೂ ವಿದೇಶಿ ಕರೆಸಿಯನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಅವರು ಜರ್ಮನಿಯಲ್ಲಿದ್ದರು. ಪಿಸಿ ಸಿಂಗ್ ಅಧ್ಯಕ್ಷರಾಗಿರುವ ಶೈಕ್ಷಣಿಕ ಸೊಸೈಟಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂಬ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾರ್ಥಿಗಳಿಂದ 2004-05, 2011-12 ರ ಅವಧಿಯಲ್ಲಿ ಸಂಗ್ರಹಿಸಲಾದ ಶುಲ್ಕವನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾವಣೆ ಮಾಡಿ ಅದನ್ನು ಬಿಷಪ್ ನ ವೈಯಕ್ತಿಕ ಅಗತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ರೀತಿಯಾಗಿ ಅಕ್ರಮವಾಗಿ ವರ್ಗಾವಣೆಯಾದ ಹಣ ಸಿಎನ್ಐ ನ ನಾಗ್ಪುರ ಕಚೇರಿಗೂ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com