ಆರ್‌ಬಿಐ ಡೆಪ್ಯೂಟಿ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ಎಂಕೆ ಜೈನ್ ಅವರ ವಿಸ್ತೃತ ಅಧಿಕಾರ ಅವಧಿ ಜೂನ್ ನಲ್ಲಿ ಅಂತ್ಯವಾಗಲಿದ್ದು, ಹೊಸ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಹುದ್ದೆಗೆ ಕೇಂದ್ರ ಹಣಕಾಸು ಸಚಿವಾಲಯ ಅರ್ಜಿಯನ್ನು ಆಹ್ವಾನಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎಂಕೆ ಜೈನ್ ಅವರ ವಿಸ್ತೃತ ಅಧಿಕಾರ ಅವಧಿ ಜೂನ್ ನಲ್ಲಿ ಅಂತ್ಯವಾಗಲಿದ್ದು, ಹೊಸ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಹುದ್ದೆಗೆ ಕೇಂದ್ರ ಹಣಕಾಸು ಸಚಿವಾಲಯ ಅರ್ಜಿಯನ್ನು ಆಹ್ವಾನಿಸಿದೆ.  ಅರ್ಜಿದಾರರು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರಬೇಕು, ಖಾಸಗಿ ವಲಯದ ಅಭ್ಯರ್ಥಿಗಳನ್ನು ಸಹ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಸಾರ್ವಜನಿಕ ಪ್ರಕಟಣೆ ತಿಳಿಸಿದೆ.

ಸಾಂಪ್ರದಾಯಿಕವಾಗಿ, ನಾಲ್ಕು ಉಪ ಗವರ್ನರ್‌ಗಳಲ್ಲಿ ಒಬ್ಬರು ಸಾರ್ವಜನಿಕ ವಲಯದ ಬ್ಯಾಂಕಿಂಗ್ ಉದ್ಯಮದಿಂದ ಬಂದವರಾಗಿರುತ್ತಾರೆ. ಖಾಸಗಿ ವಲಯದಿಂದ ಯಾರನ್ನಾದರೂ ನೇಮಿಸಲು ಸರ್ಕಾರ ನಿರ್ಧರಿಸಿದರೆ, ಅದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮೊದಲನೆಯದಾಗಲಿದೆ.  ಹಿರಿಯ ಸಾರ್ವಜನಿಕ ವಲಯದ ಬ್ಯಾಂಕರ್ ಆಗಿರುವ ಜೈನ್ ಅವರನ್ನು 2018 ರಲ್ಲಿ ಮೂರು ವರ್ಷಗಳ ಆರಂಭಿಕ ಅವಧಿಗೆ ಉಪ ಗವರ್ನರ್ ಆಗಿ ನೇಮಿಸಲಾಯಿತು ಮತ್ತು 2021 ರಲ್ಲಿ ಮತ್ತೆ ಎರಡು ವರ್ಷಗಳವರೆಗೆ ವಿಸ್ತರಿಸಲಾಯಿತು.

ಸೆಂಟ್ರಲ್ ಬ್ಯಾಂಕ್ ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿದೆ.  ಇಬ್ಬರು ಶ್ರೇಣಿಯೊಳಗಿನವರು ಮತ್ತು ಒಬ್ಬರು ವಾಣಿಜ್ಯ ಬ್ಯಾಂಕರ್ ಮತ್ತು ವಿತ್ತೀಯ ನೀತಿ ವಿಭಾಗದ ಮುಖ್ಯಸ್ಥರಾದ ಒಬ್ಬರು ಅರ್ಥಶಾಸ್ತ್ರಜ್ಞರಿರುತ್ತಾರೆ. ಅರ್ಜಿ ಸಲ್ಲಿಸದಿದ್ದರೂ ಅರ್ಹತೆ ಆಧಾರದ ಮೇಲೆ ಯಾವುದೇ ಇತರ ವ್ಯಕ್ತಿಯನ್ನು ಗುರುತಿಸಲು ಮತ್ತು ಶಿಫಾರಸು ಮಾಡಲು  ಹಣಕಾಸಿನ ವಲಯದ ನಿಯಂತ್ರಕ ನೇಮಕಾತಿಗಳ ಶೋಧನಾ ಸಮಿತಿಯು ಸ್ವತಂತ್ರವಾಗಿದೆ. ಅರ್ಹತೆ ಮತ್ತು ಅನುಭವದ ಮಾನದಂಡಗಳಲ್ಲಿ ಸಡಿಲಿಕೆಯನ್ನು ಸಮಿತಿ ಶಿಫಾರಸು ಮಾಡಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com