ಶ್ರೀಹರಿಕೋಟ: ಎಲ್‌ವಿಎಂ3-ಎಂ3/ಒನ್‌ವೆಬ್ ಇಂಡಿಯಾ-2 ಮಿಷನ್‌ನಲ್ಲಿ 36 ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಶನಿವಾರ ತಿಳಿಸಿದೆ.
ಉಪಗ್ರಹ ವಾಹಕವನ್ನು ಲಾಂಚ್ ಪ್ಯಾಡ್‍ಗೆ ಸ್ಥಳಾಂತರಿಸಲಾಗಿದ್ದು, ಮಾರ್ಚ್ 26 ರಂದು 36 ಬ್ರಾಡ್‍ಬ್ಯಾಂಡ್ ಉಪಗ್ರಹಗಳೊಂದಿಗೆ ಕಕ್ಷೆಗೆ ಹಾರಿಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಉಪಗ್ರಹಗಳನ್ನು ಹೊತ್ತ ಎಲ್ ವಿಎಂ ರಾಕೆಟ್ ಉಡಾವಣೆ ನಡೆಯಲಿದ್ದು, ಇದರಲ್ಲಿ ಬ್ರಿಟನ್ ಸಹಯೋಗವೂ ಇದೆ ಎಂದು ಇಸ್ರೋ ಹೇಳಿದೆ.
ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಇದು ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಮೂಲಕ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಸಂಸ್ಥೆಯು ತನ್ನ 36 ಉಪಗ್ರಹಗಳ ಉಡಾವಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 26 ರಂದು ಉಡಾವಣೆಗೊಳಿಸಲಿದೆ.
ಈ ಉಡಾವಣೆಯು ಒನ್ ವೆಬ್ ಸಂಸ್ಥೆಯ 18ನೇ ಉಡಾವಣೆಯಾಗಿದ್ದು, 2023ರಲ್ಲಿ ಮೂರನೇ ಉಡಾವಣೆಯಾಗಲಿದೆ. ಈ ಉಡಾವಣೆಯ ಮೂಲಕ ಒನ್ ವೆಬ್‌ನ ಮೊದಲ ತಲೆಮಾರಿನ ಎಲ್ಇಓ ಪುಂಜ ಪೂರ್ಣಗೊಳ್ಳಲಿದ್ದು, ಇದರ ಪರಿಣಾಮವಾಗಿ 2023ರಲ್ಲಿ ಜಾಗತಿಕ ವ್ಯಾಪ್ತಿ ಆರಂಭಿಸಲು ಸಂಸ್ಥೆಗೆ ಸಾಧ್ಯವಾಗುತ್ತದೆ.
Advertisement