ದಿ ಕೇರಳ ಸ್ಟೋರಿಯಲ್ಲಿನ ಅಂಶಗಳನ್ನು ಸಾಬೀತುಪಡಿಸಿದರೆ ಬಹುಮಾನ: ಕೇರಳ ಲಾಯರ್ ಘೋಷಣೆ

ದಿ ಕೇರಳ ಸ್ಟೋರಿ ಸಿನಿಮಾದ ವಾಸ್ತವಿಕ ಆಧಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವಾಗಿ ಚರ್ಚೆಗಳು ನಡೆಯುತ್ತಿದ್ದು, ಈ ಟ್ರೈಲರ್ ನ ಅಂಶಗಳನ್ನು ಸಾಬೀತುಪಡಿಸಿದರೆ ಬಹುಮಾನ ನೀಡುವುದಾಗಿ ಕೇರಳ ಲಾಯರ್ ಒಬ್ಬರು ಘೋಷಿಸಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್

ತಿರುವನಂತಪುರಂ: ದಿ ಕೇರಳ ಸ್ಟೋರಿ ಸಿನಿಮಾದ ವಾಸ್ತವಿಕ ಆಧಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವಾಗಿ ಚರ್ಚೆಗಳು ನಡೆಯುತ್ತಿದ್ದು, ಈ ಟ್ರೈಲರ್ ನ ಅಂಶಗಳನ್ನು ಸಾಬೀತುಪಡಿಸಿದರೆ ಬಹುಮಾನ ನೀಡುವುದಾಗಿ ಕೇರಳ ಲಾಯರ್ ಒಬ್ಬರು ಘೋಷಿಸಿದ್ದಾರೆ.
 
ಈಗ ಬಹುಮಾನ ಘೋಷಿಸಿರುವ ಕೇರಳದ ಲಾಯರ್ ಮಗಳ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಪತ್ನಿಯನ್ನು ಮರುವಿವಾಹವಾದ ವಿಷಯದಲ್ಲಿ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಈ ರೀತಿ ಪತ್ನಿಯನ್ನೇ ಮರುವಿವಾಹವಾಗಿದ್ದಕ್ಕೆ ಅವರಿಗೆ ಬೆದರಿಕೆಯನ್ನೂ ಹಾಕಲಾಗಿತ್ತು.

ಇದನ್ನೂ ಓದಿ: 'ಸುಳ್ಳಿನ' ಕಥೆಯ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ
 
ದಿ ಕೇರಳ ಸ್ಟೋರಿಯಲ್ಲಿ ಕೇರಳದಲ್ಲಿ 32 ಮಹಿಳೆಯರು ಇಸ್ಲಾಮ್ ಗೆ ಮತಾಂತರಗೊಂಡು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಗೆ ಸೇರ್ಪಡೆಯಾಗಿದ್ದಾರೆ ಎಂಬ ಅಂಶವಿದ್ದು, ಇದನ್ನು ಸಾಬೀತುಪಡಿಸಿದರೆ, ಯಾರು ಸಾಬೀತುಪಡಿಸುತ್ತಾರೋ ಅವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅಡ್ವೊಕೇಟ್-ನಟ ಸಿ ಶುಕ್ಕುರ್  ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com